News Hour: ಹಿಂಸಾರೂಪ ತಾಳಿದ ಪಂಚಮಸಾಲಿಗಳ ಮೀಸಲು ಹೋರಾಟ
ಬೆಳಗಾವಿಯಲ್ಲಿ ಪಂಚಮಸಾಲಿ ಸಮುದಾಯದ ಮೀಸಲಾತಿ ಹೋರಾಟ ಹಿಂಸಾರೂಪಕ್ಕೆ ತಿರುಗಿದೆ. ಸುವರ್ಣಸೌಧ ಮುತ್ತಿಗೆ ಯತ್ನದ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆ ನಡೆದಿದ್ದು, ಹಲವರನ್ನು ವಶಕ್ಕೆ ಪಡೆಯಲಾಗಿದೆ.
ಬೆಂಗಳೂರು (ಡಿ.11): ಬೆಳಗಾವಿಯಲ್ಲಿ ಪಂಚಮಸಾಲಿ ಸಮುದಾಯದ ಮೀಸಲು ಕಿಚ್ಚು ಹಿಂಸಾರೂಪ ತಾಳಿದೆ. ಪಂಚಮಸಾಲಿ ಮುಖಂಡರೊಂದಿಗೆ ಸಚಿವರ ಸಂಧಾನ ಕೂಡ ವಿಫಲವಾಗಿದೆ. ಇದರಿಂದಾಗಿ ಮಂಗಳವಾರ ಸುವರ್ಣಸೌಧ ಮುತ್ತಿಗೆ ಯತ್ನ ಮಾಡಲಾಗಿದ್ದು, ಭಾರಿ ಹೈಡ್ರಾಮಾ, ಲಾಠಿಚಾರ್ಜ್ ಕೂಡ ನಡೆದಿದೆ.
ಸುವರ್ಣ ಸೌಧ ರಣಾಂಗಣವಾಗಿದ್ದು, ಕಲ್ಲು ತೂರಾಟ ಮಾಡಿದವರನ್ನು ಖಾಕಿ ಥಳಿಸಿದೆ. ಕೊಂಡಸಕೊಪ್ಪದಿಂದ ಬಂದ ಯಾತ್ರೆ ಸುವರ್ಣ ಸೌಧ ಮುತ್ತಿಗೆ ಯತ್ನಿಸಿತ್ತು. ಇವರನ್ನು ಪೊಲೀಸರು ತಡೆದಿದ್ದಕ್ಕೆ ಗಲಾಟೆ, ಜಟಾಪಟಿ ನಡೆದಿತ್ತು.
ದೇಶದ 12 ಬ್ಯಾಂಕ್‌ಗಳಿಂದ 25,500 ಕೋಟಿ ಸಾಲ ಕೇಳಿದ ರಿಲಯನ್ಸ್ ಇಂಡಸ್ಟ್ರೀಸ್!
ಪುಣೆ-ಬೆಂಗಳೂರು ಹೆದ್ದಾರಿ ತಡೆದು ಪಂಚಮಸಾಲಿಗಳ ಧರಣಿ ಮಾಡಿದ್ದಾರೆ. ಈ ವೇಳೆ ಮಾತಿನ ಚಕಮಕಿ ನಡೆದು ಹಿಗ್ಗಾಮುಗ್ಗ ಥಳಿತವಾಗಿದೆ. ಪಂಚಮಸಾಲಿ ಮೀಸಲಾತಿ ಕಿಚ್ಚಿನಲ್ಲಿ ಪೊಲೀಸರ ವಾಹನ ಜಖಂ ಆಗಿದೆ. ಯತ್ನಾಳ್,ಬೆಲ್ಲದ್,ಕಡಾಡಿ ಸೇರಿ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೊನೆಗೆ ಸ್ವಾಮೀಜಿಯನ್ನೂ ಬೆಳಗಾವಿ ಪೊಲೀಸರು ವಶಕ್ಕೆ ಪಡೆದುಕೊಂಡರು. ಇದರ ಬೆನ್ನಲ್ಲಿಯೇ ಮೀಸಲು ಕಿಚ್ಚು ಇನ್ನಷ್ಟು ತೀವ್ರವಾಗಿತ್ತು.