ದೇಶದ 12 ಬ್ಯಾಂಕ್‌ಗಳಿಂದ 25,500 ಕೋಟಿ ಸಾಲ ಕೇಳಿದ ರಿಲಯನ್ಸ್ ಇಂಡಸ್ಟ್ರೀಸ್!
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ $3 ಶತಕೋಟಿ (ಸುಮಾರು ₹ 25,500 ಕೋಟಿ) ಸಾಲ ಕೇಳಿದೆ. 2025 ರ ಮೊದಲ ತ್ರೈಮಾಸಿಕದಲ್ಲಿ ಸಾಲವನ್ನು 'ವಿಶಾಲ ಮಾರುಕಟ್ಟೆ'ಗೆ ಸಿಂಡಿಕೇಟ್ ಮಾಡಲಾಗುವುದು ಎಂದು ವರದಿ ಹೇಳಿದೆ.
ಮುಂಬೈ (ಡಿ.10): ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) $3 ಶತಕೋಟಿ (ಸುಮಾರು ₹ 25,500 ಕೋಟಿ) ಮೌಲ್ಯದ ಸಾಲ ಕೇಳಿದೆ.ಒಂದು ವರ್ಷದಲ್ಲಿ ಭಾರತದ ಅತ್ಯಂತ ದೊಡ್ಡ ಆಫ್‌ಶೋರ್ ಸಾಲದ ಬಗ್ಗೆ ಬ್ಯಾಂಕ್‌ಗಳೊಂದಿಗೆ ಮಾತುಕತೆ ನಡೆಸುತ್ತಿದ ಬ್ಲೂಮ್‌ಬರ್ಗ್ ವರದಿ ಮಾಡಿದೆ. ಮುಂಬೈನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ RIL, ಸುಮಾರು ಅರ್ಧ ಡಜನ್ ಸಾಲದಾತ ಬ್ಯಾಂಕ್‌ಗಳೊಂದಿಗೆ ಚರ್ಚೆ ನಡೆಸುತ್ತಿದೆ, 2025 ರ ಮೊದಲ ತ್ರೈಮಾಸಿಕದಲ್ಲಿ ಸಾಲವನ್ನು 'ವಿಶಾಲ ಮಾರುಕಟ್ಟೆ'ಗೆ ಸಿಂಡಿಕೇಟ್ ಮಾಡಲಾಗುವುದು ಎಂದು ವರದಿ ಹೇಳಿದೆ. ರಿಲಯನ್ಸ್ ತನ್ನ ಬಾಕಿಯನ್ನು ತೀರಿಸುವ ಗುರಿಯನ್ನು ಹೊಂದಿರುವ ಸಾಲದ ನಿಯಮಗಳು ಇನ್ನೂ ಅಂತಿಮಗೊಂಡಿಲ್ಲ ಮತ್ತು ಬದಲಾವಣೆಗಳಿಗೆ ಒಳಪಟ್ಟಿರಬಹುದು ಎನ್ನಲಾಗಿದೆ.
ಮುಂದಿನ ವರ್ಷದ ವೇಳೆ ಸುಮಾರು $2.9 ಶತಕೋಟಿ ಮೌಲ್ಯದ ತೀರಿಸಬೇಕಾದ ಸಾಲವನ್ನು ಕಂಪನಿ ಹೊಂದಿರಲಿದೆ ಎಂದು ವರದಿಯಾಗಿದೆ. ಕಳೆದ ವರ್ಷ ರಿಲಯನ್ಸ್ ಕಂಪನಿ ಒಟ್ಟು 700 ಕೋಟಿ ರೂಪಾಯಿ ಸಾಲ ಪಡೆದುಕೊಂಡಿತ್ತು. ಇದು ಭಾರತದ ಕಂಪನಿಯೊಂದು ಪಡೆದ ದೊಡ್ಡ ಸಾಲ ಎನಿಸಿಕೊಂಡಿತ್ತು.
ಸುಮಾರು 55 ಬ್ಯಾಂಕ್‌ಗಳು ರಿಲಯನ್ಸ್‌ಗೆ ಸಾಲ ನೀಡುವಲ್ಲಿ ಭಾಗವಹಿಸಿದ್ದವು. ಈ ನಡುವೆ ರಿಲಯನ್ಸ್‌ಗೆ ಕೆಲವು ಬ್ಯಾಂಕ್‌ಗಳು ಉತ್ತಮ ದರದಲ್ಲಿ ಸಾಲಗಳನ್ನು ನೀಡಲು ಮುಂದಾಗಿವೆ ಎನ್ನಲಾಗಿದೆ.ಸ್ಥಳೀಯ ಇಕ್ವಿಟಿಗಳಿಂದ ನಡೆಯುತ್ತಿರುವ ಹೊರಹರಿವಿನಿಂದಾಗಿ ನವೆಂಬರ್‌ನಲ್ಲಿ ಯುಎಸ್ ಡಾಲರ್ ಎದುರು ಕನಿಷ್ಠ ಮಟ್ಟವನ್ನು ತಲುಪುವ ಮೂಲಕ ಭಾರತೀಯ ರೂಪಾಯಿ ದುರ್ಬಲಗೊಳ್ಳುತ್ತಿರುವಾಗಲೂ ಹೊಸ ಸಾಲದ ಕುರಿತು ವರದಿ ಬಂದಿದೆ.
Justice is Due ಎಂದು ಬರೆದು ಸಾವಿಗೆ ಶರಣಾದ ಯುವಕನ 12 ಕೊನೆಯ ಆಸೆ, ಈಡೇರಿಸುತ್ತಾ ನಮ್ಮ ಸಮಾಜ?
ರಿಲಯನ್ಸ್ ಪ್ರಸ್ತುತ ಭಾರತದ ಸಾರ್ವಭೌಮ ಗ್ರೇಡ್‌ಗಿಂತ ಹೆಚ್ಚಿನ ದರ್ಜೆಯನ್ನು ಹೊಂದಿದೆ, ಇದು ಕಂಪನಿಯೊಂದು ಅದು ನೆಲೆಗೊಂಡಿರುವ ದೇಶಕ್ಕಿಂತ ಹೆಚ್ಚಿನ ಸಾಲದ ಅರ್ಹತೆಯನ್ನು ಅನುಭವಿಸುತ್ತಿರುವ ಅಪರೂಪದ ಉದಾಹರಣೆಯಾಗಿದೆ. ಕಳೆದ ವಾರ, ಮೂಡೀಸ್ RIL ಗೆ ತನ್ನ ರೇಟಿಂಗ್‌ಗಳನ್ನು 'Baa2' ನಲ್ಲಿ ಪುನರುಚ್ಚರಿಸಿತು, ಗುಂಪಿನ ಕ್ರೆಡಿಟ್ ಮೆಟ್ರಿಕ್‌ಗಳು 'ಗಟ್ಟಿಯಾಗಿ ಸ್ಥಾನ ಪಡೆದಿವೆ' ಮತ್ತು 'ಹೆಚ್ಚಿನ ನಡೆಯುತ್ತಿರುವ ಬಂಡವಾಳದ ವೆಚ್ಚದ ಹೊರತಾಗಿಯೂ ಅದು ಹಾಗೆಯೇ ಉಳಿಯುತ್ತದೆ. ಎಂದಿತ್ತು.
2025ರಲ್ಲಿ ಷೇರು ಮಾರುಕಟ್ಟೆಗೆ ಬರಲಿದೆ ಪ್ರಖ್ಯಾತ ಕಂಪನಿಗಳ IPO, ಇದರ ಮೌಲ್ಯವೇ 1.5 ಲಕ್ಷ ಕೋಟಿ!