Panchamasali Peetha ಪಂಚಮಸಾಲಿ 3ನೇ ಪೀಠ ವಿವಾದ, ಸ್ವಾಮೀಜಿಗೆ ಮುರಗೇಶ್ ನಿರಾಣಿ ತಿರುಗೇಟು

ಪಂಚಮಸಾಲಿ ಮೂರನೇ ಪೀಠ ಸ್ಥಾಪನೆ ವಿವಾದ ತಾರಕಕ್ಕೇರಿದೆ. 3ನೇ ಪೀಠ ಸ್ಥಾಪನೆಗೆ ಜಯಮೃತ್ಯುಂಜಯಶ್ರೀ ಹೇಳಿಕೆಗೆ  ಸಚಿವ ಮುರುಗೇಶ್ ನಿರಾಣಿ ತಿರುಗೇಟು ಕೊಟ್ಟಿದ್ದಾರೆ.
 

First Published Jan 22, 2022, 6:42 PM IST | Last Updated Jan 22, 2022, 6:42 PM IST

ಬಾಗಲಕೋಟೆ, (ಜ.22): ಪಂಚಮಸಾಲಿ ಮೂರನೇ ಪೀಠ ಸ್ಥಾಪನೆ ವಿವಾದ ತಾರಕಕ್ಕೇರಿದೆ. 3ನೇ ಪೀಠ ಸ್ಥಾಪನೆಗೆ ಜಯಮೃತ್ಯುಂಜಯಶ್ರೀ ಹೇಳಿಕೆಗೆ  ಸಚಿವ ಮುರುಗೇಶ್ ನಿರಾಣಿ ತಿರುಗೇಟು ಕೊಟ್ಟಿದ್ದಾರೆ.

Panchamasali Peetha ಪಂಚಮಸಾಲಿ 3ನೇ ಪೀಠ ಮಾಡಿರುವುದೇ ಸಿಎಂ ಆಗೋದಕ್ಕೆ

ವೀರಶೈವ ಲಿಂಗಾಯತ ಪಂಚಮಸಾಲಿ ಹೆಸರಲ್ಲಿ ಮೂರನೆ ಪೀಠದ ಹಿಂದೆ ಮುರುಗೇಶ್ ನಿರಾಣಿ ಕೈವಾಡವಿದೆ ಎಂಬ ಕಾಶಪ್ಪನವರ್ ಹಾಗೂ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿಕೆ ವಿಚಾರವಾಗಿ ಬಾಗಲಕೋಟೆಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಚಿವ‌ ಮುರುಗೇಶ್ ನಿರಾಣಿ, ಪಂಚಮಸಾಲಿ 3ನೇ ಪೀಠವಾದರೆ ತಪ್ಪೇನಲ್ಲ. ಸ್ವಾಮೀಜಿಗಳು ಆಪಾದನೆ ಬಿಟ್ಟು ಜವಾಬ್ದಾರಿ ತೆಗೆದುಕೊಳ್ಳಲಿ. ಅವರೇ ಮುಂದೆ ನಿಂತು ಪೀಠ ರಚನೆಯ ಜವಾಬ್ದಾರಿ ತೆಗೆದುಕೊಳ್ಳಬೇಕು. ಪ್ರತಿಷ್ಠೆಗಾಗಿ ಬರೀ ಅಪಾದನೆ ಮಾಡಬಾರದು ಎಂದು ಟಾಂಗ್ ಕೊಟ್ಟರು.