ತೈಲ ಬೆಲೆ ಏರಿಕೆ ಖಂಡಿಸಿ 'ಕೈ' ನಾಯಕರ ಸೈಕಲ್ ಜಾಥಾ; ನೋ ಸೋಷಿಯಲ್ ಡಿಸ್ಟನ್ಸ್..!
ಕಚ್ಚಾತೈಲದ ಬೆಲೆ ಕಡಿಮೆ ಆದರೂ ದೇಶದಲ್ಲಿ ಕೇಂದ್ರ ಸರ್ಕಾರ ಪೆಟ್ರೋಲ್ ಡಿಸೇಲ್ ಬೆಲೆ ಇಳಿಕೆ ಮಾಡಿಲ್ಲ. ಪೆಟ್ರೋಲ್ ಮೇಲಿನ ತೆರಿಗೆಯನ್ನ ಕೇಂದ್ರ ಸರ್ಕಾರ ಹೆಚ್ಚಿಸುತ್ತಲೇ ಇದೆ ಎಂದು ಕೈ ನಾಯಕರು ಬೆಲೆ ಏರಿಕೆಯನ್ನು ವಿರೋಧಿಸಿ ಕೆಪಿಸಿಸಿ ಕಚೇರಿಯಿಂದ ಆದಾಯ ತೆರಿಗೆ ಕಚೇರಿ ತನಕ ಸೈಕಲ್ ಜಾಥಾ ನಡೆಸಿದ್ದಾರೆ.
ಬೆಂಗಳೂರು (ಜೂ. 29): ಕಚ್ಚಾತೈಲದ ಬೆಲೆ ಕಡಿಮೆ ಆದರೂ ದೇಶದಲ್ಲಿ ಕೇಂದ್ರ ಸರ್ಕಾರ ಪೆಟ್ರೋಲ್ ಡಿಸೇಲ್ ಬೆಲೆ ಇಳಿಕೆ ಮಾಡಿಲ್ಲ. ಪೆಟ್ರೋಲ್ ಮೇಲಿನ ತೆರಿಗೆಯನ್ನ ಕೇಂದ್ರ ಸರ್ಕಾರ ಹೆಚ್ಚಿಸುತ್ತಲೇ ಇದೆ ಎಂದು ಕೈ ನಾಯಕರು ಬೆಲೆ ಏರಿಕೆಯನ್ನು ವಿರೋಧಿಸಿ ಕೆಪಿಸಿಸಿ ಕಚೇರಿಯಿಂದ ಆದಾಯ ತೆರಿಗೆ ಕಚೇರಿ ತನಕ ಸೈಕಲ್ ಜಾಥಾ ನಡೆಸಿದ್ದಾರೆ.
'ಪಾಂಚಜನ್ಯ'ದ ಹಿಂದಿದ್ದ ಶಿಷ್ಯನೇ ಕೃಷ್ಣ ಬೀಗನಾಗಿದ್ದು ಹೇಗೆ?
ಪೆಟ್ರೋಲ್ ಮೇಲಿನ ತೆರಿಗೆಯನ್ನ ಕೇಂದ್ರ ಸರ್ಕಾರ ಹೆಚ್ಚಿಸುತ್ತಲೇ ಇದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ 37 ಡಾಲರ್ ಇದೆ. ಈ ಹಿಂದೆ ಮನಮೋಹನ್ ಸಿಂಗ್ ಪ್ರಧಾನಿ ಆಗಿರುವ ವೇಳೆ ಕ್ರೂಡ್ ಆಯ್ಲ್ ಬೆಲೆ 140 ಡಾಲರ್ ವರೆಗೆ ಏರಿತ್ತು. ಅಷ್ಟು ಏರಿಕೆ ಆಗಿದ್ರು ದೇಶದಲ್ಲಿ ಜನಸಾಮಾನ್ಯರಿಗೆ 80 ರೂ ಗೆ ಲೀಟರ್ ಪೆಟ್ರೋಲ್ ದೊರೆಯುತ್ತಿತ್ತು.ಈಗ 37 ಡಾಲರ್ ಗೆ ಕಚ್ಚಾತೈಲದ ಬೆಲೆ ಇಳಿದರು 83 ರೂ ಲೀಟರ್ ಪೆಟ್ರೋಲ್ ದೊರೆಯುತ್ತಿದೆ ಎಂದು ಕೈ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.