ತತ್ವ ಸಿದ್ದಾಂತ, ನಂಬಿಕೆಯಿಂದ ಯಾರೂ ಸಿದ್ದು ಜೊತೆ ಹೋಗಲ್ಲ: ಬಿಜೆಪಿ
'ಅವಕಾಶವಾದ ಹಾಗೂ ಅಧಿಕಾರದ ದಾಹದಿಂದ ಕಾಂಗ್ರೆಸ್‌ಗೆ ಹೋಗಬಹುದು. ತತ್ತ ಸಿದ್ದಾಂತ, ನಂಬಿಕೆಯಿಂದ ಯಾರೂ ಸಿದ್ದರಾಮಯ್ಯ ಜೊತೆ ಹೋಗಲ್ಲ' ಎಂದು ಬಿಜೆಪಿ ' ಸಿದ್ದರಾಮಯ್ಯ (Siddaramaiah) ಕಾಲೆಳೆದಿದೆ.
ಬೆಂಗಳೂರು (ಜ. 25): ಜೆಡಿಎಸ್, ಬಿಜೆಪಿ ಶಾಸಕರು ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆ. ಎಷ್ಟು ಶಾಸಕರಿದ್ದಾರೆ, ಅವರ್ಯಾರು ಎಂದು ನಾವು ಹೇಳುವುದಿಲ್ಲ ಎಂದು ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ. ಬಿಜೆಪಿ ಶಾಸಕರು ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆ ಎಂದು ಯತ್ನಾಳ್ (Yathnal) ಹೇಳಿದ್ದರು. ಅವರ ಮಾತನ್ನು ಸಿದ್ದರಾಮಯ್ಯ ಪುಷ್ಠೀಕರಿಸಿದ್ದಾರೆ.
'ಬಿಜೆಪಿಯಿಂದ ಯಾರೂ ಹೊರ ಹೋಗುವ ಪ್ರಶ್ನೆಯಿಲ್ಲ, ಸ್ವಲ್ಪ ದಿನದಲ್ಲೇ ಭಾರೀ ಬದಲಾವಣೆ: ಸಿಎಂ
'ಅವಕಾಶವಾದ ಹಾಗೂ ಅಧಿಕಾರದ ದಾಹದಿಮದ ಕಾಂಗ್ರೆಸ್‌ಗೆ ಹೋಗಬಹುದು. ತತ್ತ ಸಿದ್ದಾಂತ, ನಂಬಿಕೆಯಿಂದ ಯಾರೂ ಸಿದ್ದರಾಮಯ್ಯ ಜೊತೆ ಹೋಗಲ್ಲ ಸಿದ್ದರಾಮಯ್ಯ ಹಾಗೂ ಡಿಕೆಶಿ ಕತ್ತಲೆಯಲ್ಲಿ ಕಪ್ಪು ಬೆಕ್ಕು ಹುಡುಕುತ್ತಿದ್ದಾರೆ. ಬಿಜೆಪಿಯವರು ನಮ್ಮ ಸಂಪರ್ಕದಲ್ಲಿ ಇದ್ದಾರೆ ಎಂದು ಭ್ರಮೆ ಸೃಷ್ಟಿಸಿಕೊಳ್ಳುತ್ತಿದ್ದಾರೆ. ಈ ಇಬ್ಬರು ನಾಯಕರಿಗೆ ಧೈರ್ಯವಿದ್ದರೆ, ಅವರ ಸಂಪರ್ಕಕ್ಕೆ ಬಂದ ಒಬ್ಬ ಬಿಜೆಪಿ ಶಾಸಕನ ಹೆಸರನ್ನು ಬಹಿರಂಗಪಡಿಸಲಿ' ಎಂದು ಬಿಜೆಪಿ ಕಾಲೆಳೆದಿದೆ.