Bommai @ 62: ಸಿಎಂ ಆಗಿ 6 ತಿಂಗಳು, 62 ನೇ ಹುಟ್ಟುಹಬ್ಬ, ಡಬಲ್‌ ಸಂಭ್ರಮದಲ್ಲಿ ಬೊಮ್ಮಾಯಿ

 ಸಿಎಂ ಬೊಮ್ಮಾಯಿಗೆ (CM Bommai) ಇಂದು ಡಬಲ್ ಸಂಭ್ರಮ. ಸಿಎಂ ಆಗಿ ಅಧಿಕಾರ ವಹಿಸಿಕೊಂಡು ಇಂದಿಗೆ 6 ತಿಂಗಳು ಮುಕ್ತಾಯವಾಗಿದೆ. ಜೊತೆಗೆ ಇಂದು 62 ನೇ ಹುಟ್ಟುಹಬ್ಬದ ಸಂಭ್ರಮ.

Share this Video
  • FB
  • Linkdin
  • Whatsapp

ಬೆಂಗಳೂರು (ಜ. 28):  ಸಿಎಂ ಬೊಮ್ಮಾಯಿಗೆ (CM Bommai) ಇಂದು ಡಬಲ್ ಸಂಭ್ರಮ. ಸಿಎಂ ಆಗಿ ಅಧಿಕಾರ ವಹಿಸಿಕೊಂಡು ಇಂದಿಗೆ 6 ತಿಂಗಳು ಮುಕ್ತಾಯವಾಗಿದೆ. ಜೊತೆಗೆ ಇಂದು 62 ನೇ ಹುಟ್ಟುಹಬ್ಬದ ಸಂಭ್ರಮ.

ಅಧಿಕಾರ ಸ್ವೀಕರಿಸಿದ ಮೊದಲ ಕೆಲ ದಿನಗಳಲ್ಲೇ ಸಿಎಂ (ಮುಖ್ಯಮಂತ್ರಿ) ಎಂದರೆ ‘ಕಾಮನ್‌ ಮ್ಯಾನ್‌’ ಎನ್ನುವ ಮೂಲಕ ಮೆಚ್ಚುಗೆ ಗಳಿಸಿದ ಬೊಮ್ಮಾಯಿ ಅವರು ದಿನಗಳೆದಂತೆ ಆಡಳಿತದಲ್ಲಿ ತಮ್ಮದೇ ಛಾಪು ಮೂಡಿಸುವತ್ತ ಹೆಜ್ಜೆ ಇಟ್ಟಿದ್ದಾರೆ.

Karnataka Politics ನಮ್ಮ ನಾಯಕ ಸಿದ್ದರಾಮಯ್ಯ ಹೇಳಿದ್ದು ನಿಜ, ಜಾರಕಿಹೊಳಿ ಹೊಸ ಬಾಂಬ್

ತಮ್ಮ ನೇತೃತ್ವದ ಸರ್ಕಾರ ಆರು ತಿಂಗಳು ಪೂರೈಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಸರ್ಕಾರದ ಸಾಧನೆಗಳನ್ನು ಒಳಗೊಂಡ ‘ಭವ್ಯ ಭವಿಷ್ಯದ ಭರವಸೆಯ ಹೆಜ್ಜೆಗಳು’ ಎಂಬ ಶೀರ್ಷಿಕೆಯುಳ್ಳ ಸಾಧನಾ ಪುಸ್ತಕವನ್ನು ಬಿಡುಗಡೆಗೊಳಿಸಲಿದ್ದಾರೆ. ಬೆಳಗ್ಗೆ 11 ಗಂಟೆಗೆ ವಿಧಾನಸೌಧದ ಬ್ಯಾಂಕ್ವೆಟ್‌ ಸಭಾಂಗಣದಲ್ಲಿ ಆಯೋಜಿಸಿರುವ ಸಭೆಯಲ್ಲಿ ಈ ಸಾಧನಾ ಪುಸ್ತಕ ಬಿಡುಗಡೆಗೊಳಿಸಿ ಮುಖ್ಯಮಂತ್ರಿಗಳು ಮಾತನಾಡಲಿದ್ದಾರೆ. ಬಹುತೇಕ ಎಲ್ಲ ಸಚಿವರೂ ಭಾಗವಹಿಸಲಿದ್ದಾರೆ.

Related Video