ಕೊರೋನಾದಿಂದ ಬೆಂಗಳೂರು ಸೇಫ್: ಇಂದು ಪತ್ತೆಯಾಗಿಲ್ಲ ಒಂದೇ ಒಂದು ಕೇಸ್

ಮಂಗಳವಾರ 131 ಇದ್ದ ಸೋಂಕಿತರ ಸಂಖ್ಯೆ ಇಂದು ಬೆಂಗಳೂರಿನಲ್ಲಿ 130ಕ್ಕೆ ಇಳಿದಿದೆ. ಇನ್ನು ಒಟ್ಟಾರೆ ರಾಜ್ಯದಲ್ಲಿಂದು 9 ಹೊಸ ಕೊರೋನಾ ಕೇಸ್‌ಗಳು ಪತ್ತೆಯಾಗಿವೆ. ನಿನ್ನೆ 523 ಕೊರೋನಾ ಪ್ರಕರಣಗಳು ದಾಖಲಾಗಿದ್ದವು ಇಂದು 532ಕ್ಕೆ ಏರಿಕೆಯಾಗಿದೆ.

Share this Video
  • FB
  • Linkdin
  • Whatsapp

ಬೆಂಗಳೂರು(ಏ.29): ಕೊರೋನಾ ವಿಚಾರವಾಗಿ ಬೆಂಗಳೂರು ಮಂದಿ ನೆಮ್ಮದಿಯ ನಿಟ್ಟುಸಿರು ಬಿಡುವಂತಹ ಸುದ್ದಿಯೊಂದು ಹೊರಬಿದ್ದಿದೆ. ಬುಧವಾರ ಬಿಡುಗಡೆಯಾದ ಹೆಲ್ತ್ ಬುಲೆಟಿನ್‌ನಂತೆ ಬೆಂಗಳೂರಿನಲ್ಲಿಂದು ಒಂದೇ ಒಂದು ಪ್ರಕರಣ ಪತ್ತೆಯಾಗಿಲ್ಲ. ಕೋವಿಡ್ 19 ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖವಾಗಿದೆ.

ಮಂಗಳವಾರ 131 ಇದ್ದ ಸೋಂಕಿತರ ಸಂಖ್ಯೆ ಇಂದು ಬೆಂಗಳೂರಿನಲ್ಲಿ 130ಕ್ಕೆ ಇಳಿದಿದೆ. ಇನ್ನು ಒಟ್ಟಾರೆ ರಾಜ್ಯದಲ್ಲಿಂದು 9 ಹೊಸ ಕೊರೋನಾ ಕೇಸ್‌ಗಳು ಪತ್ತೆಯಾಗಿವೆ. ನಿನ್ನೆ 523 ಕೊರೋನಾ ಪ್ರಕರಣಗಳು ದಾಖಲಾಗಿದ್ದವು ಇಂದು 532ಕ್ಕೆ ಏರಿಕೆಯಾಗಿದೆ.

ಅನ್‌ಲಾಕ್ ಆಗಿರುವ ಜಿಲ್ಲೆಗಳಲ್ಲಿ ಹೇಗಿದೆ ಪರಿಸ್ಥಿತಿ? ಯಾವುದಕ್ಕಿದೆ ವಿನಾಯಿತಿ?

ಈ ಪೈಕಿ ಬರೋಬ್ಬರಿ 8 ಪ್ರಕರಣಗಳು ಕಲಬುರಗಿಯಲ್ಲಿ ಪತ್ತೆಯಾಗಿದ್ದರೆ, ಒಂದು ಪ್ರಕರಣ ಬೆಳಗಾವಿಯಲ್ಲಿ ದಾಖಲಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

Related Video