
ಬೆಂಗಳೂರು: ವಿಜಯನಗರ ಮಸೀದಿಗೆ ಬಿಬಿಎಂಪಿ ನೋಟಿಸ್; ಮುಸ್ಲಿಮ್ ಮುಖಂಡರಿಂದ ಆಕ್ರೋಶ
ಸಾರ್ವಜನಿಕರ ಓಡಾಟಕ್ಕೆಂದು ಮೀಸಲಾಗಿಟ್ಟಿದ್ದ ಜಾಗವನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಲಾಗಿದ್ದ ಮಸೀದಿಯ ಒತ್ತುವರಿ ಜಾಗದಲ್ಲಿರುವ ಭಾಗವನ್ನು ತೆರವುಗೊಳಿಸುವಂತೆ ಬಿಬಿಎಂಪಿ ಮಸ್‌ಜಿದ್ ಎ ಅಲ್ ಖುಬ ಮಸೀದಿಯ ಮುಖ್ಯಸ್ಥರಿಗೆ ನೋಟಿಸ್ ಜಾರಿ ಮಾಡಿದೆ.
ಬೆಂಗಳೂರು (ಜು. 19): ಸಾರ್ವಜನಿಕರ ಓಡಾಟಕ್ಕೆಂದು ಮೀಸಲಾಗಿಟ್ಟಿದ್ದ ಜಾಗವನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಲಾಗಿದ್ದ ಮಸೀದಿಯ ಒತ್ತುವರಿ ಜಾಗದಲ್ಲಿರುವ ಭಾಗವನ್ನು ತೆರವುಗೊಳಿಸುವಂತೆ ಬಿಬಿಎಂಪಿ ಮಸ್‌ಜಿದ್ ಎ ಅಲ್ ಖುಬ ಮಸೀದಿಯ ಮುಖ್ಯಸ್ಥರಿಗೆ ನೋಟಿಸ್ ಜಾರಿ ಮಾಡಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ವಿಜಯನಗರದ ಆರ್‌ಪಿಸಿ ಲೇಔಟ್ ಹೊಸಹಳ್ಳಿ ಬಡಾವಣೆಯ 3ನೇ ಮುಖ್ಯ ರಸ್ತೆಯಲ್ಲಿರುವ ನಿವೇಶನ ಸಂಖ್ಯೆ 13 ಮತ್ತು 15 ಖಾಸಗಿ ಮಾಲಿಕತ್ವದ ಸ್ವತ್ತಾಗಿದ್ದು, ಇವುಗಳ ನಡುವಿನ ನಿವೇಶನ ಸಂಖ್ಯೆ 14 (5/45 ಚದರ ಅಡಿ) ಸಾರ್ವಜನಿಕರ ಓಡಾಟಕ್ಕೆಂದು ಮೀಸಲಾಗಿದ್ದ (ಪ್ಯಾಸೇಜ್) ಜಾಗವಾಗಿತ್ತು. ಬಿಬಿಎಂಪಿ ನೊಟೀಸ್‌ಗೆ ಮುಸ್ಲಿಂ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.