ಕೊಡಗಿನಲ್ಲಿ ಅರ್ಚಕರ ಕುಟುಂಬ ಕಣ್ಮರೆ: ಕಾರ್ಯಾಚರಣೆಗೆ ಮಳೆ ಅಡ್ಡಿ

ಧಾರಾಕಾರ ಮಳೆಯಿಂದ ಗುಡ್ಡ ಕುಸಿದು ಅರ್ಚಕರ ಕುಟುಂಬ ಭೂಸಮಾಧಿಯಾಗಿದೆ. ಭೂ ಕುಸಿತದಲ್ಲಿ ಕೊಚ್ಚಿ ಹೋದವರ  ಕಾರ್ಯಾಚರಣೆ ಮಾಡುವುದು ಕಷ್ಟವಾಗಿದೆ. ಎಡಬಿಡದೇ ಮಳೆ ಸುರಿಯುತ್ತಿರುವುದರಿಂದ ಕಾರ್ಯಾಚರಣೆ ಮಾಡುವುದು ಕಷ್ಟದ ಕೆಲಸವಾಗಿದೆ. 

First Published Aug 7, 2020, 11:51 AM IST | Last Updated Aug 7, 2020, 1:11 PM IST

ಕೊಡಗು (ಅ. 07): ಧಾರಾಕಾರ ಮಳೆಯಿಂದ ಗುಡ್ಡ ಕುಸಿದು ಅರ್ಚಕರ ಕುಟುಂಬ ಭೂಸಮಾಧಿಯಾಗಿದೆ. ಭೂ ಕುಸಿತದಲ್ಲಿ ಕೊಚ್ಚಿ ಹೋದವರ  ಕಾರ್ಯಾಚರಣೆ ಮಾಡುವುದು ಕಷ್ಟವಾಗಿದೆ. ಎಡಬಿಡದೇ ಮಳೆ ಸುರಿಯುತ್ತಿರುವುದರಿಂದ ಕಾರ್ಯಾಚರಣೆ ಮಾಡುವುದು ಕಷ್ಟದ ಕೆಲಸವಾಗಿದೆ. 

ಅರ್ಚಕ ನಾರಾಯಣಾಚಾರ್, ಪತ್ನಿ ಶಾಂತಾ, ಸಹಾಯಕ ಅರ್ಚಕರಾದ ಶ್ರೀನಿವಾಸ ಪಡ್ಡಿಲ್ಲಾಯ, ರವಿಕಿರನ್ ಅವಶೇಷಗಳ ಅಡಿ ಸಿಲುಕಿದ್ದಾರೆ. ಇವರೆಲ್ಲರ ಹುಡುಕಾಟ ನಡೆದಿದೆ. ದುರಂತದ ಅಗಾಧತೆ ನೋಡಿದರೆ ಕಣ್ಮರೆಯಾದವರು ಬದುಕುಳಿದಿರುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗುತ್ತಿದೆ. 

ಕೊಡಗಿನಲ್ಲಿ ಬ್ರಹ್ಮಗಿರಿ ಬೆಟ್ಟ ಸೇರಿ 20 ಕಡೆ ಭೂ ಕುಸಿತ