Asianet Suvarna News Asianet Suvarna News

ಪಿಪಿಇ ಕಿಟ್ ಖರೀದಿಯಲ್ಲಿ ಅವ್ಯವಹಾರ; ಆರೋಗ್ಯ ಇಲಾಖೆ ಹೇಳುವುದೇನು?

ಆರೋಗ್ಯ ಇಲಾಖೆ ಮೇಲೆ ಕೋವಿಡ್ ಉಪಕರಣ ಖರೀದಿ ಅವ್ಯವಹಾರ ಆರೋಪ ಕೇಳಿ ಬಂದಿದೆ.  ಅವ್ಯವಹಾರ ಆಗಿಲ್ಲ, ದುಪ್ಪಟ್ಟು ದರದಲ್ಲಿ ಉಪಕರಣವನ್ನು ಖರೀದಿಸಲಾಗಿದೆ. ಡ್ರಗ್ಸ್ ಲಾಜಿಸ್ಟಿಕ್ ಮತ್ತು ಹೌಸಿಂಗ್ ಸೊಸೈಟಿ PPE ಕಿಟ್ ಖರೀದಿಸಿಲ್ಲ ಎಂದು ಸ್ಪಷ್ಟನೆ ನೀಡಿದೆ. 

ಬೆಂಗಳೂರು (ಜು. 11): ಆರೋಗ್ಯ ಇಲಾಖೆ ಮೇಲೆ ಕೋವಿಡ್ ಉಪಕರಣ ಖರೀದಿ ಅವ್ಯವಹಾರ ಆರೋಪ ಕೇಳಿ ಬಂದಿದೆ.  ಅವ್ಯವಹಾರ ಆಗಿಲ್ಲ, ದುಪ್ಪಟ್ಟು ದರದಲ್ಲಿ ಉಪಕರಣವನ್ನು ಖರೀದಿಸಲಾಗಿದೆ. ಡ್ರಗ್ಸ್ ಲಾಜಿಸ್ಟಿಕ್ ಮತ್ತು ಹೌಸಿಂಗ್ ಸೊಸೈಟಿ PPE ಕಿಟ್ ಖರೀದಿಸಿಲ್ಲ ಎಂದು ಆರೋಗ್ಯ ಇಲಾಖೆ ತನ್ನ ನಡೆಯನ್ನು ಸಮರ್ಥಿಸಿಕೊಂಡಿದೆ. 

ಏನಿದು ಎಡವಟ್ಟು.!? ಗುಣಮುಖ ಎಂದು ಡಿಸ್ಚಾರ್ಜ್ ಆದವರಲ್ಲಿ ಸೋಂಕು ಪತ್ತೆ

ಇದರ ವೈಶಿಷ್ಟ್ಯ ಹಾಗೂ ಅಂದಾಜಿನ ಬಗ್ಗೆ ಮಾಹಿತಿ ಇರಲಿಲ್ಲ. ವಿವಿಧ ಸಂಸ್ಥೆಗಳಿಂದ 10 ಲಕ್ಷ ಕಿಟ್‌ಗೆ ಆದೇಶ ನೀಡಲಾಗಿತ್ತು. ಯಾವ ಸಂಸ್ಥೆಯೂ ಸಮರ್ಪಕವಾಗಿ ಸರಬರಾಜು ಮಾಡಿಲ್ಲ. ಹಾಗಾಗಿ ಪ್ಲಾಸ್ಟಿ ಇಂಡಸ್ಟ್ರಿಯಿಂದ ಖರೀದಿಸಲಾಗಿತ್ತು, ಇದರ ಗುಣಮಟ್ಟ ಕಳಪೆಯಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಅಂತಿಮವಾಗಿ ಸ್ಥಳೀಯವಾಗಿ ಉತ್ತಮ ಗುಣಮಟ್ಟಕ್ಕೆ ಪಿಪಿಇ ಕಿಟ್ ಸಿಕ್ಕಿದ್ದರಿಂದ ಒಂದೂವರೆ ಲಕ್ಷ ಪಿಪಿಇ ಕಿಟ್ ಆದೇಶವನ್ನು ರದ್ದುಗೊಳಿಸಿದ್ದೇವೆ ಎಂದು ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ. ದುಬಾರಿ ವೆಚ್ಚದಲ್ಲಿ ಕಿಟ್ ಖರೀದಿಸಿದ್ದೇವೆಯೇ ಹೊರತು ಅವ್ಯವಹಾರ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದೆ. 

Video Top Stories