ಯುಗಾದಿಗೆ ಊರಿಗೆ ಹೋಗುವ ಪ್ಲ್ಯಾನ್ ಇದ್ದರೆ ಬಿಟ್ಹಾಕಿ, ನಿಮ್ಮಿಂದ ಹಳ್ಳಿಗಳಿಗೂ ಹರಡಬಹುದು ವೈರಸ್!
ಒಂದು ಕಡೆ ಕೊರೊನಾ ಸೋಂಕು ಏರಿಕೆಯಾಗುತ್ತಲೇ ಇದೆ. ಇನ್ನೊಂದು ಕಡೆ ಯುಗಾದಿ ಹಬ್ಬ ಬಂದಿದೆ. ಹಬ್ಬ ಎಂದರೆ ಜನ ಮಾರುಕಟ್ಟೆಗೆ, ಆಚರಣೆಗೆ ಒಂದು ಕಡೆ ಸೇರುವುದು ಸಾಮಾನ್ಯ. ಆದರೆ ಈ ಬಾರಿ ಹಾಗೆ ಮಾಡಲಾಗುವುದಿಲ್ಲ.
ಬೆಂಗಳೂರು (ಏ. 04): ಒಂದು ಕಡೆ ಕೊರೊನಾ ಸೋಂಕು ಏರಿಕೆಯಾಗುತ್ತಲೇ ಇದೆ. ಇನ್ನೊಂದು ಕಡೆ ಯುಗಾದಿ ಹಬ್ಬ ಬಂದಿದೆ. ಹಬ್ಬ ಎಂದರೆ ಜನ ಮಾರುಕಟ್ಟೆಗೆ, ಆಚರಣೆಗೆ ಒಂದು ಕಡೆ ಸೇರುವುದು ಸಾಮಾನ್ಯ. ಆದರೆ ಈ ಬಾರಿ ಹಾಗೆ ಮಾಡಲಾಗುವುದಿಲ್ಲ. ಮೈಮರೆತರೆ ಅಪಾಯವನ್ನು ಆಹ್ವಾನಿಸಿದಂತಾಗುವುದು. ಹಾಗಾಗಿ ಮನೆಯಲ್ಲಿಯೇ ಸರಳವಾಗಿ ಆಚರಿಸುವುದು ಉತ್ತಮ ಎಂದು ತಜ್ಞರು ಎಚ್ಚರಿಸಿದ್ದಾರೆ.
ಏಪ್ರಿಲ್ 15 ಕ್ಕೆ 2 ನೇ ಅಲೆ ಗರಿಷ್ಠ, ಮೇ ಅಂತ್ಯಕ್ಕೆ ಇಳಿಕೆ; ರೂಲ್ಸ್ ಫಾಲೋ ಮಾಡದಿದ್ರೆ ಗಂಡಾಂತರ!
ಇನ್ನು ಹಬ್ಬಕ್ಕೆಂದು ಬೆಂಗಳೂರಿನಿಂದ ಊರಿನ ಕಡೆ ಹೋಗುವವರು ಸದ್ಯಕ್ಕೆ ಹೋಗದಿರುವುದು ಉತ್ತಮ. ಹಳ್ಳಿಗಳಲ್ಲೂ ವೈರಸ್ ಹಬ್ಬುವ ಸಾಧ್ಯತೆ ಇದೆ ಎಂದು ಡಾ. ಮಂಜುನಾಥ್ ಎಚ್ಚರಿಸಿದ್ದಾರೆ.