ಏಪ್ರಿಲ್ 15 ಕ್ಕೆ 2 ನೇ ಅಲೆ ಗರಿಷ್ಠ, ಮೇ ಅಂತ್ಯಕ್ಕೆ ಇಳಿಕೆ; ರೂಲ್ಸ್ ಫಾಲೋ ಮಾಡದಿದ್ರೆ ಗಂಡಾಂತರ!
ದೇಶದಲ್ಲಿ ಭಾರಿ ಪ್ರಮಾಣದಲ್ಲಿ ವ್ಯಾಪಿಸುತ್ತಿರುವ ಕೊರೋನಾ ವೈರಸ್‌ನ ಎರಡನೇ ಅಲೆ ಏ.15ರಿಂದ 20ರ ವೇಳೆಗೆ ಗರಿಷ್ಠಕ್ಕೆ ಹೋಗಲಿದೆ. ನಂತರ ಇಳಿಕೆಯಾಗಲು ಆರಂಭಿಸಿ ಮೇ ಅಂತ್ಯದೊಳಗೆ ಪೂರ್ಣ ಪ್ರಮಾಣದಲ್ಲಿ ಇಳಿಕೆಯಾಗಲಿದೆ ಎಂದು ತಜ್ಞರು ಭವಿಷ್ಯ ನುಡಿದಿದ್ದಾರೆ.
ಬೆಂಗಳೂರು (ಏ.03): ದೇಶದಲ್ಲಿ ಭಾರಿ ಪ್ರಮಾಣದಲ್ಲಿ ವ್ಯಾಪಿಸುತ್ತಿರುವ ಕೊರೋನಾ ವೈರಸ್‌ನ ಎರಡನೇ ಅಲೆ ಏ.15ರಿಂದ 20ರ ವೇಳೆಗೆ ಗರಿಷ್ಠಕ್ಕೆ ಹೋಗಲಿದೆ. ನಂತರ ಇಳಿಕೆಯಾಗಲು ಆರಂಭಿಸಿ ಮೇ ಅಂತ್ಯದೊಳಗೆ ಪೂರ್ಣ ಪ್ರಮಾಣದಲ್ಲಿ ಇಳಿಕೆಯಾಗಲಿದೆ ಎಂದು ತಜ್ಞರು ಭವಿಷ್ಯ ನುಡಿದಿದ್ದಾರೆ.
ಅಧ್ಯಯನದ ಪ್ರಕಾರ, 2ನೇ ಅಲೆ ಬಹಳ ವೇಗವಾಗಿ ಗರಿಷ್ಠಕ್ಕೆ ಹೋಗಿ ಅಷ್ಟೇ ವೇಗವಾಗಿ ಕೆಳಕ್ಕಿಳಿಯಲಿದೆ. ದೇಶದಲ್ಲೇ ಮೊದಲು ಪಂಜಾಬ್‌ನಲ್ಲಿ ಪ್ರಕರಣಗಳ ಸಂಖ್ಯೆ ಗರಿಷ್ಠಕ್ಕೆ ತಲುಪಲಿದೆ. ನಂತರ ಮಹಾರಾಷ್ಟ್ರದಲ್ಲಿ ಗರಿಷ್ಠಕ್ಕೆ ತಲುಪಿ ಇಳಿಕೆಯಾಗಲು ಆರಂಭವಾಗಲಿದೆ. ಮೇ ಅಂತ್ಯದಲ್ಲಿ ಅತ್ಯಂತ ನಾಟಕೀಯವಾಗಿ ಕೊರೋನಾ ಸೋಂಕು ಇಳಿಕೆಯಾಗಲಿದೆ.ಎಂದು ಹೇಳಲಾಗಿದೆ.