ಮೀಸಲಾತಿ ಘೋಷಣೆ ನಂತರ ಯುದ್ಧೋತ್ಸಾಹದಲ್ಲಿ ಬಿಜೆಪಿ..!
ಎಸ್‌ಸಿ-ಎಸ್‌ಟಿಗೆ ಮೀಸಲಾತಿ ಘೋಷಣೆ ಮಾಡಿದ ಬಳಿಕ, ಚುನಾವಣಾ ರಣಕಣದಲ್ಲಿ ಬಿಜೆಪಿ ಯುದ್ಧೋತ್ಸಾಹದಲ್ಲಿ ಮುಂದುವರಿದಿದೆ. ಜನಸಂಕಲ್ಪ ಯಾತ್ರೆಯ 2ನೇ ದಿನ ಹೊಸಕೋಟೆ ಹಾಗೂ ಕುಷ್ಟಗಿಯಲ್ಲಿ ಕಳೆದ ಮಾಜಿ ಸಿಎಂ ಬಿಎಸ್‌ವೈ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ದಲಿತ ಕೇರಿಯಲ್ಲಿ ಮಿಂಚಿನ ಸಂಚಾರ ನಡೆಸಿದರು.
ಬೆಂಗಳೂರು (ಅ.12): ಎಸ್‌ಸಿ-ಎಸ್‌ಟಿ ಮೀಸಲಾತಿ ಘೋಷಣೆ ಮಾಡಿದ ಬಳಿಕ ಕಾಂಗ್ರೆಸ್‌ಗೆ ಸೆಡ್ಡು ಹೊಡೆಯಲು ಜನಸಂಕಲ್ಪ ಯಾತ್ರೆಯನ್ನು ಬಿಜೆಪಿ ಆರಂಭಿಸಿದೆ. 2ನೇ ದಿನವಾದ ಬುಧವಾರ ಹೊಸಪೇಟೆ, ಕುಷ್ಟಗಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಿಂಚಿನ ಸಂಚಾರ ನಡೆಸಿದರು. ಅಲ್ಲಿಯೇ ಉಪಹಾರವನ್ನೂ ಸೇವಿಸಿದರು.
ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಹೈಕಮಾಂಡ್ ಟಾಸ್ಕ್ ನೀಡಿದ್ದು, ಕೇಂದ್ರದ ಮಾದರಿ ರಾಜ್ಯದಲ್ಲೂ ಬಿಜೆಪಿ ಹೈಕಮಾಂಡ್ ಜಾರಿಗೆ ತಂದಿದೆ. ರಾಜ್ಯದ 50 ಕ್ಷೇತ್ರಗಳಲ್ಲಿ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ಯಾತ್ರೆ ನಡೆಸಲಿದೆ. ಕಳೆದ ಸಲ ಸೋತ ಕ್ಷೇತ್ರಗಳಲ್ಲೇ ಈ ಬಾರಿ ಗೆಲ್ಲಲು ಬಿಜೆಪಿ ರಣತಂತ್ರ ರೂಪಿಸಿದೆ.
ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ 150 ಸ್ಥಾನ ಖಚಿತ: ಯಡಿಯೂರಪ್ಪ
2018ರ ಚುನಾವಣೆಯಲ್ಲಿ ಬಿಜೆಪಿಯಿಂದ ಕೆಲವು ಕಡೆ ಕಳಪೆ ಸಾಧನೆ. ಕೆಲವೆಡೆ ಹಾಲಿ ಬಿಜೆಪಿ ಶಾಸಕರಿದ್ದರೂ ಸೋಲಿನ ಭೀತಿಯೂ ಇದೆ. ಕೆಲವು ಜಿಲ್ಲೆಗಳಲ್ಲಿ ಬಿಜೆಪಿ ಎದುರಾಳಿ ಕಾಂಗ್ರೆಸ್ ಪ್ರಾಬಲ್ಯ ಹೊಂದಿದೆ. ಇನ್ನೂ ಕೆಲವೆಡೆ ಬಿಜೆಪಿ & ಕಾಂಗ್ರೆಸ್ ನಾಯಕರ ಮಧ್ಯೆ ಸಮಬಲವಿದೆ ಇಂಥ ಪ್ರದೇಶಗಳನ್ನು ನೋಡಿಕೊಂಡು ಬಿಜೆಪಿ ಮತ ಸಂಘಟನೆ ಮಾಡಲಿದೆ,