Asianet Suvarna News Asianet Suvarna News

ಸಿಂಧೂರಿ v/s ಶಿಲ್ಪಾನಾಗ್‌: ಏನಿದು ಇನ್‌ಸೈಡ್ ಪಾಲಿಟಿಕ್ಸ್..?

ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್‌ ಅವರ ನಡುವೆ ಶುಕ್ರವಾರವೂ ಹೇಳಿಕೆಗಳ ಸಮರ ಮುಂದುವರೆದಿದ್ದು, ಜಟಾಪಟಿ ತಾರಕಕ್ಕೇರಿದೆ. 

ಮೈಸೂರು (ಜೂ. 05): ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ  ಹಾಗೂ ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್‌ ಅವರ ನಡುವೆ ಹೇಳಿಕೆಗಳ ಸಮರ ಮುಂದುವರೆದಿದ್ದು, ಜಟಾಪಟಿ ತಾರಕಕ್ಕೇರಿದೆ. 'ನನಗೆ ಆಗುತ್ತಿರುವ ತೊಂದರೆಗಳು, ನಾನು ಜಿಲ್ಲಾಧಿಕಾರಿಗಳಿಂದ ಅನುಭವಿಸುತ್ತಿದ್ದ ಅವಮಾನ, ವೈಯಕ್ತಿಕ ನಿಂದನೆಗಳು, ನನ್ನ ಅಧಿಕಾರಿಗಳಿಗೆ ಆಗುತ್ತಿರುವ ಕಿರುಕುಳಗಳು, ನನ್ನ ಬಗ್ಗೆ ರಾಜ್ಯ ಸರ್ಕಾರದ ಮಟ್ಟದಲ್ಲಿ ತಪ್ಪು ಮಾಹಿತಿ ನೀಡಿ ನಿಂದನಾತ್ಮಕ ವರದಿ ಮಾಡುತ್ತಿರುವ ಬಗ್ಗೆ ಮಾನಸಿಕವಾಗಿ ನೊಂದಿದ್ದೇನೆ' ಎಂದು ಶಿಲ್ಪಾನಾಗ್ ಆರೋಪಿಸಿದ್ಧಾರೆ. 

ಸಂಧಾನ ಸಕ್ಸಸ್ : ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ರಾಜೀನಾಮೆ ವಾಪಸ್

ಶಿಲ್ಪಾ ಅವರ ಆರೋಪಗಳಿಗೆ ಪ್ರತಿಯಾಗಿ ರೋಹಿಣಿ ಸಿಂಧೂರಿ ಅವರು, ‘ಶಿಲ್ಪಾ ಅವರ ಬಳಿ ಸಿಎಸ್‌ಆರ್‌ ಫಂಡ್‌ನ ಲೆಕ್ಕ ಕೇಳಿದ್ದೆ. ಅವರು ಕೊಟ್ಟಿಲ್ಲ. ವಾರ್ಡುಗಳಲ್ಲಿ 400 ಇದ್ದ ಪಾಸಿಟಿವ್‌ ಕೇಸ್‌ಗಳು ಮರುದಿನ 50 ಎಂದಾದರೆ ಸರಿಯಾದ ಲೆಕ್ಕ ಕೊಡಬೇಕು ಅಲ್ಲವೇ? ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಏನಿದು ಇಬ್ಬರ ನಡುವಿನ ಜಟಾಪಟಿ..? ರೋಹಿಣಿ ವಿರುದ್ಧ ಮುಗಿಬಿದ್ದಿರೊದ್ಯಾಕೆ ಆಡಳಿತ ವರ್ಗ.? ಇಲ್ಲಿದೆ ಇನ್‌ಸೈಡ್ ಪಾಲಿಟಿಕ್ಸ್..!
 

Video Top Stories