ಸಂಧಾನ ಸಕ್ಸಸ್: ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ರಾಜೀನಾಮೆ ವಾಪಸ್

 - ಡೀಸಿ ಮೇಲೆ ದೌರ್ಜನ್ಯ, ಕಿರುಕುಳ ಆರೋಪ ಮಾಡಿ ರಾಜಿನಾಮೆ ನೀಡಿದ್ದ ಶಿಲ್ಪಾನಾಗ್,

- ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಉಪಸ್ಥಿತಿಯಲ್ಲಿ  ಸಂಧಾನ ಯಶಸ್ವಿ

- ಸೋಮವಾರದಿಂದ ಕರ್ತವ್ಯಕ್ಕೆ ಹಾಜರ್

First Published Jun 5, 2021, 3:01 PM IST | Last Updated Jun 5, 2021, 3:04 PM IST

ಮೈಸೂರು (ಜೂ. 05): ಕೋವಿಡ್ ನಿಯಂತ್ರಣ ವಿಚಾರದಲ್ಲಿ ಡೀಸಿ ರೋಹಿಣಿ ಸಿಂಧೂರಿ ಹಾಗೂ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ನಡುವಿನ ಜಟಾಪಟಿ ಬಹಳ ಚರ್ಚೆಯಾಗುತ್ತಿದೆ. ಡೀಸಿ ಮೇಲೆ ದೌರ್ಜನ್ಯ, ಕಿರುಕುಳ ಆರೋಪ ಮಾಡಿ ರಾಜಿನಾಮೆ ನೀಡಿದ್ದ ಶಿಲ್ಪಾನಾಗ್, ಇದೀಗ ರಾಜೀನಾಮೆಯನ್ನು ವಾಪಸ್ ಪಡೆದಿದ್ದಾರೆ. ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಉಪಸ್ಥಿತಿಯಲ್ಲಿ ನಡೆದ ಸಂಧಾನ ಯಶಸ್ವಿಯಾಗಿದೆ. ಸೋಮವಾರದಿಂದ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ.

ಸಿಡಿದೆದ್ದ ಶಿಲ್ಪಾನಾಗ್: ಸಿಂಧೂರಿ ಆರೋಪಕ್ಕೆ ಅಂಕಿ- ಅಂಶ ಸಮೇತ ಪ್ರತ್ಯುತ್ತರ