Narayana Guru Tableau Row: ಭುಗಿಲೆದ್ದ ಆಕ್ರೋಶ, 'ಸ್ವಾಭಿಮಾನ ನಡಿಗೆ’ಗೆ ವ್ಯಾಪಕ ಬೆಂಬಲ

ಗಣರಾಜ್ಯೋತ್ಸವ ಪೆರೇಡ್‌ನಲ್ಲಿ (Republic Day Parade) ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರಕ್ಕೆ (Tableau) ಅವಕಾಶ ನಿರಾಕರಿಸಿದ ಹಿನ್ನೆಲೆಯಲ್ಲಿ, ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ (Janardhana Poojari)ನೇತೃತ್ವದಲ್ಲಿ ಬಿಲ್ಲವ ಸಂಘಟನೆಗಳು ಹಾಗೂ ಬಿಲ್ಲವ ಸಮಾಜ ಕರೆ ನೀಡಿದ್ದ ರಾಜಕೀಯ ರಹಿತ ‘ಸ್ವಾಭಿಮಾನ ನಡಿಗೆ’ಗೆ ಕರಾವಳಿಯಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. 
 

Share this Video
  • FB
  • Linkdin
  • Whatsapp

ಬೆಂಗಳೂರು (ಜ. 28): ಗಣರಾಜ್ಯೋತ್ಸವ ಪೆರೇಡ್‌ನಲ್ಲಿ (Republic Day Parade) ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರಕ್ಕೆ (Tableau) ಅವಕಾಶ ನಿರಾಕರಿಸಿದ ಹಿನ್ನೆಲೆಯಲ್ಲಿ, ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ (Janardhana Poojari)ನೇತೃತ್ವದಲ್ಲಿ ಬಿಲ್ಲವ ಸಂಘಟನೆಗಳು ಹಾಗೂ ಬಿಲ್ಲವ ಸಮಾಜ ಕರೆ ನೀಡಿದ್ದ ರಾಜಕೀಯ ರಹಿತ ‘ಸ್ವಾಭಿಮಾನ ನಡಿಗೆ’ಗೆ ಕರಾವಳಿಯಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. 

ಮಂಗಳೂರು ನಗರ ವ್ಯಾಪ್ತಿಗೆ ಸಂಬಂಧಿಸಿದಂತೆ ಕುದ್ರೋಳಿ ದೇವಾಲಯ ನೇತೃತ್ವದ ರಾರ‍ಯಲಿಗೆ ಕಂಕನಾಡಿ ಗರೋಡಿಯಲ್ಲಿ ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಚಾಲನೆ ನೀಡಿದರು. ನಾರಾಯಣ ಗುರುಗಳ ಹತ್ತಾರು ಟ್ಯಾಬ್ಲೋಗಳೂ ಈ ಮೆರವಣಿಗೆಯಲ್ಲಿದ್ದವು. ಇನ್ನು ಉತ್ತರಕನ್ನಡದ ದಾಂಡೇಲಿ, ಮೈಸೂರು, ಶಿವಮೊಗ್ಗದಲ್ಲೂ ವಿವಿಧ ಸಂಘಟನೆಗಳು ಸ್ವಾಭಿಮಾನ ನಡಿಗೆ ನಡೆಸಿದವು.

ಕೇರಳ ಸರ್ಕಾರ ಸ್ತಬ್ದಚಿತ್ರ ನಿರ್ಮಾಣದ ವಿಚಾರದಲ್ಲಿ ತೋರಿದಂತೆ ಅಸಡ್ಡೆಯನ್ನೂ ತೋರಿಸಿದೆ. ತನ್ನದೇ ನ್ಯೂನತೆಗಳ ಕಾರಣದಿಂದಾಗಿ ಕೇರಳ ರಾಜ್ಯದ ಜಟಾಯು, ನಾರಾಯಣಗುರು ಸ್ತಬ್ದಚಿತ್ರ ಅಂತಿಮ ಪಟ್ಟಿಗೆ ಏರಲು ವಿಫಲವಾಗಿದೆ.

Related Video