Narayana Gowda: ಕರವೇ ನಾರಾಯಣ ಗೌಡರ ಮೊದಲ ಪ್ರತಿಭಟನೆ ಪ್ರಾರಂಭವಾಗಿದ್ದು ಹೇಗೆ? ಹಿಂದಿ ಭಾಷಿಕರನ್ನು ಕಂಡ್ರೆ ಆಗುವುದಿಲ್ವಾ ?
ನಾನು ನನ್ನ ಕಾರ್ಯಕರ್ತರನ್ನು ವಾಪಸ್ ಕಳಿಸಿಲ್ಲ. ಅವರ ಕಷ್ಟ, ಸುಖ, ದುಃಖದಲ್ಲಿ ನಾನು ಭಾಗಿಯಾಗಿದ್ದೇನೆ ಎಂದು ಕರವೇ ನಾರಾಯಣ ಗೌಡ ಹೇಳುತ್ತಾರೆ.
ಕನ್ನಡ ನಾಡು, ನುಡಿ, ಜಲ ಎಂದ ತಕ್ಷಣ ನಮಗೆಲ್ಲಾ ನೆನಪಾಗೋದು ಕರವೇ. ಕರವೇ(Karave) ಎಂದ ತಕ್ಷಣ ನೆನಪಾಗೋ ಹೆಸರೆಂದರೇ ನಾರಾಯಣ ಗೌಡ(Narayana Gowda). ಇವರು ಕನ್ನಡದ(Kannada) ಉಳಿವಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ ಎಂದು ಹೇಳಬಹುದು. ಕನ್ನಡಪರ ಏನೇ ಹೋರಾಟವಿದ್ದರೂ, ಅಲ್ಲಿ ಮುಂಚೂಣಿಯಲ್ಲಿರುವವರು ಕರವೇ ನಾರಾಯಣ ಗೌಡರು. ಸದ್ಯ ಕರವೇಯನ್ನು ಕಟ್ಟಿ ಇಲ್ಲಿಗೆ 25 ವರ್ಷವಾಗಿದೆ. ಅರಸಿಕೆರೆಯ ಗಣಪತಿ ಉತ್ಸವ ಕಾರ್ಯಕ್ರಮದಲ್ಲಿ ಅಂದರೇ ಎಂಟನೇ ತರಗತಿಯಿಂದಲೇ ಹೋರಾಟವನ್ನು ಆರಂಭಿಸಿದ್ರಂತೆ. ಎಷ್ಟೇ ಕಷ್ಟಗಳು ಎದುರಾದ್ರೂ, ನನಗೆ ನ್ಯಾಯ ಸಿಕ್ಕಿದೆ ಎಂಬ ತೃಪ್ತಿ ಇದೆ ಎಂದು ಕರವೇ ನಾರಾಯಣ ಗೌಡ ಹೇಳುತ್ತಾರೆ.
ಇದನ್ನೂ ವೀಕ್ಷಿಸಿ: Today Horoscope: ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ?