ಬರೀ ಸಭೆಗಳಿಂದ ಕೆಲಸ ಆಗಲ್ರೀ, ಸಿಎಂ ಸಭೆಯಲ್ಲಿ ಡೀಸಿ ವಿರುದ್ಧ ಪ್ರತಾಪ್ ಸಿಂಹ ಅಸಮಾಧಾನ

- ಡೀಸಿ ರೋಹಿಣಿ ಸಿಂಧೂರಿ ವಿರುದ್ಧ ಸಂಸದ ಪ್ರತಾಪ್ ಸಿಂಹ ಅಸಮಾಧಾನ- ಸಿಎಂ ಸಭೆಯಲ್ಲಿ ಪ್ರತಾಪ್ ಸಿಂಹ, ಜಿಟಿಡಿ ಹೈಡ್ರಾಮಾ- ಅಧಿಕಾರಿಗಳೂ ಫೀಲ್ಡಿಗಿಳಿಯಬೇಕು ಎಂದು ಅಸಮಾಧಾನ

Share this Video
  • FB
  • Linkdin
  • Whatsapp

ಮೈಸೂರು (ಮೇ. 29): ಡೀಸಿ ರೋಹಿಣಿ ಸಿಂಧೂರಿ ವಿರುದ್ಧ ಸಂಸದ ಪ್ರತಾಪ್ ಸಿಂಹ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನೊಂದು ಕಡೆ ಸಿಂಧೂರಿ ಪರ ಜಿಟಿ ದೇವೇಗೌಡ ಬ್ಯಾಟಿಂಗ್ ಮಾಡಿದ್ದಾರೆ. 

ಅಧಿಕಾರಿಗಳೇ ಆಡಳಿತ ನಡೆಸುತ್ತಾರೆ ಎಂಬ ಮನಸ್ಥಿತಿ ಸರಿಯಲ್ಲ. ಜನಪ್ರತಿನಿಧಿಗಳು ಹೆಗಲು ಕೊಟ್ಟಾಗಲೇ ಸಮಸ್ಯೆ ಬಗೆಹರಿಯುವುದು. ಜಿಲ್ಲಾಡಳಿತ ಸಂಜೆ 6 ರಿಂದ 9 ರವರೆಗೆ ಸಭೆ ನಡೆಸುತ್ತಾರೆ. ಹೀಗಾದ್ರೆ ತಾಲ್ಲೂಕು ಅಧಿಕಾರಿಗಳು ಹಳ್ಳಿಗೆ ಹೋಗೋದ್ಹೇಗೆ..? ಬರೀ ಸಭೆಗಳಿಂದ ಕೆಲಸ ಆಗುವುದಿಲ್ಲ. ಅಧಿಕಾರಿಗಳೂ ಫೀಲ್ಡಿಗಿಳಿಯಬೇಕು' ಎಂದು ಪ್ರತಾಪ್ ಸಿಂಹ ಡೀಸಿ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ಧಾರೆ. 

Related Video