Hijab Row: ಹಿಜಾಬ್ ಅಂತ ಕಿತಾಬ್ ಮರೆತು ಮಕ್ಕಳನ್ನು ಹೆರುವ ಯಂತ್ರವಾಗಬೇಡಿ: ಪ್ರತಾಪ್ ಸಿಂಹ

ಹಿಜಾಬ್ (Hijab) ಅಂತ ಮಕ್ಕಳನ್ನು ಹೆರುವ ಯಂತ್ರವಾಗಬೇಡಿ. ಹಿಜಾಬ್ ಬದಲು ಕಿತಾಬ್ ಹಿಡಿದರೆ ಭವಿಷ್ಯ ಉಜ್ವಲವಾಗುತ್ತದೆ ಎಂದು ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ (Pratap Simha) ಹೇಳಿದ್ದಾರೆ. 

First Published Feb 13, 2022, 3:22 PM IST | Last Updated Feb 13, 2022, 3:22 PM IST

ಬೆಂಗಳೂರು (ಫೆ. 13): ಹಿಜಾಬ್ (Hijab) ಅಂತ ಮಕ್ಕಳನ್ನು ಹೆರುವ ಯಂತ್ರವಾಗಬೇಡಿ. ಹಿಜಾಬ್ ಬದಲು ಕಿತಾಬ್ ಹಿಡಿದರೆ ಭವಿಷ್ಯ ಉಜ್ವಲವಾಗುತ್ತದೆ ಎಂದು ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ (Pratap Simha) ಹೇಳಿದ್ದಾರೆ. 

ಹಿಜಾಬ್ ಹಿಜಾಬ್ ಅಂತ ಕಿತಾಬ್‌ ಮರೆತು ಮಕ್ಕಳನ್ನು ಹೆರುವ ಯಂತ್ರವಾಗಬೇಡಿ. ನೀವೂ ಮುಖ್ಯವಾಹಿನಿಗೆ ಬರಬೇಕು. ನೀವೂ ವಿದ್ಯೆ ಕಲಿತು, ಸ್ವತಂತ್ರರಾಗಿ ದುಡಿಮೆ ಮಾಡಬೇಕು ಎಂಬುದು ನಮ್ಮ ಉದ್ದೇಶ. ನೀವೆಲ್ಲಾ ಶಾಲೆಗೆ ಬಂದು ಸೌಹಾರ್ದಯುತವಾಗಿ ಕಲಿಯಿರಿ ಎಂದು ಪ್ರತಾಪ್ ಸಿಂಹ ಮನವಿ ಮಾಡಿದರು. 

ಡಿಜೆ ಹಳ್ಳಿ, ಡಿಜೆ ಹಳ್ಳಿ ಪ್ರಕರಣದ ನಂತರವಾದರೂ ಪಿಎಫ್‌ಐ, ಕೆಎಫ್‌ಡಿ ಬ್ಯಾನ್ ಮಾಡಬಹುದು ಎಂಬುದು ನಿರೀಕ್ಷೆ ಇತ್ತು. ಆದರೆ ಸರ್ಕಾರ ಇನ್ನೂ ಮಾಡಿಲ್ಲ. ಆದಷ್ಟು ಶೀಘ್ರದಲ್ಲಿ ಇವುಗಳನ್ನು ಬ್ಯಾನ್ ಮಾಡಬೇಕು ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.