Asianet Suvarna News Asianet Suvarna News

Murugha Matha Row: ಮುರುಘಾ ಶ್ರೀ ವಿರುದ್ಧ ಅಟ್ರಾಸಿಟಿ ಕೇಸ್‌ ದಾಖಲು

ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಎದುರಿಸುತ್ತಿರುವ ಚಿತ್ರದುರ್ಗದ ಮುರುಘಾ ಮಠದ ಶ್ರೀಗಳ ವಿರುದ್ಧ ಅಟ್ರಾಸಿಟಿ ಕೇಸ್‌ ಕೂಡ ದಾಖಲಾಗಿದೆ. ಇದರ ನಡುವೆ, ಅವರನ್ನು ಬಂಧನ ಮಾಡುವಂತೆ ಪ್ರತಿಭಟನೆಗಳು ಆರಂಭವಾಗಿದೆ.

First Published Aug 30, 2022, 4:36 PM IST | Last Updated Aug 30, 2022, 4:36 PM IST

ಬೆಂಗಳೂರು (ಆ. 30): ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ಮುರುಘಾ ಶ್ರೀಗಳಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಮುರುಘಾ ಶ್ರೀ ವಿರುದ್ಧ ಅಟ್ರಾಸಿಟಿ ಕೇಸ್‌ ದಾಖಲು ಮಾಡಲಾಗಿದೆ. ನೊಂದ ಬಾಲಕಿಯರ ಪೈಕಿ ಒಬ್ಬಳು ಪರಿಶಿಷ್ಟ ಜಾತಿಗೆ ಸೇರಿದವಳಾಗಿರುವ ಕಾರಣ, ಎಸ್‌ಸಿ ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಪೋಕ್ಸೋ ಕಾಯ್ದೆಯಡಿ ಈಗಾಗಲೇ ಶ್ರೀಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಅದರ ನಡುವೆ ಈಗ ಅಟ್ರಾಸಿಟಿ ಕೂಡ ದಾಖಲಾಗಿರುವ ಕಾರಣ ದೊಡ್ಡ ಸಂಕಷ್ಟ ಎದುರಾಗಿದೆ. ಮುರುಘಾ ಶ್ರೀ ವಿರುದ್ಧ ದೂರು ನೀಡಿದರ ಪೈಕಿ ಒಬ್ಬರು ಪರಿಶಿಷ್ಟ ಜಾತಿಯ ಬಾಲಕಿಯಾಗಿದ್ದಾಳೆ.ಹಾಗಾಗಿ ಅವರ ದೂರಿನಲ್ಲಿ ಹೆಚ್ಚುವರಿ ಕಲಂಅನ್ನು ಸೇರಿಸಲಾಗಿದೆ. ನ್ಯಾಯಲಯದ ಅನುಮತಿ ಪಡೆದು ಹೆಚ್ಚುವರಿ ಕಲಂ ಸೇರಿಸಲಾಗಿದೆ.

ವದಂತಿಗಳನ್ನು ನಂಬಬೇಡಿ, ಸಂಕಟದಿಂದ ಪಾರಾಗಿ ಬರುತ್ತೇನೆ: ಮುರುಘಾ ಶ್ರೀ

ಈ ಕುರಿತಾಗಿ ಚಿತ್ರದುರ್ಗ ಎಸ್‌ಪಿ ಕೆ.ಪರಶುರಾಮ್‌ ಈ ಮಾಹಿತಿ ನೀಡಿದ್ದಾರೆ. ಈ ನಡುವೆ ತಾತ್ಕಾಲಿಕವಾಗಿ ಪೀಠ ತ್ಯಜಿಸಿ, ತನಿಖೆಗೆ ಸಹಕರಿಸುವಂತೆ ಮೈಸೂರಿನಲ್ಲಿ ಬಿಜೆಪಿ ಮುಖಂಡ ಎಚ್.ವಿಶ್ವನಾಥ್‌ ಹೇಳಿದ್ದಾರೆ.

Video Top Stories