ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಹೊರಡಿಸಿದ ಪತ್ರದಲ್ಲಿ ಪ್ರಾಸಿಕ್ಯೂಷನ್ ಪದವೇ ಇಲ್ಲ!

ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಈ ಕುರಿತು 6 ಪುಟಗಳ ಆದೇಶವನ್ನು ಹೊರಡಿಸಿದ್ದಾರೆ. ಆದರೆ ಈ ಪತ್ರದಲ್ಲಿ ಪ್ರಾಸಿಕ್ಯೂಷನ್ ಅನ್ನೋ ಪದವೇ ಬಳಸಿಲ್ಲ. 
 

First Published Aug 17, 2024, 11:29 PM IST | Last Updated Aug 17, 2024, 11:31 PM IST

ಸಿದ್ದರಾಮಯ್ಯ ವಿರುದ್ಧ ತನಿಖೆಗೆ ರಾಜ್ಯಪಾಲರು ಅಸ್ತು ಎಂದಿದ್ದಾರೆ. ಮುಡಾ ಪ್ರಕರಣ ಸಂಬಂಧ ರಾಜ್ಯಪಾಲರು ಹೊರಡಿಸಿದ ಪ್ರತಿಯಲ್ಲಿ ಏನಿದೆ? ಈ ಪತ್ರದಲ್ಲಿ ರಾಜ್ಯಪಾಲರು ಎಲ್ಲೂ ಕೂಡ ಪ್ರಾಸಿಕ್ಯೂಶನ್ ಪದವೇ ಬಳಕೆಯಾಗಿಲ್ಲ. ನೇರವಾಗಿ ತನಿಖೆ ಅನುಮತಿ ನೀಡುವುದಾಗಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಪ್ರಾಸಿಕ್ಯೂಷನ್‌ಗೂ ತನಿಖೆಗೆ ಅನುಮತಿ ಇರುವ ವ್ಯತ್ಯಾಸವೇನು?