ನರೇಂದ್ರ ಮೋದಿ ಏನ್ಮಾಡಿದ್ದಾರೆ ಎನ್ನುವವರಿಗೆ ಖಡಕ್ ಉತ್ತರ ಕೊಟ್ಟ ತೇಜಸ್ವಿ ಸೂರ್ಯ
- 'ವ್ಯಾಕ್ಸಿನ್ ಬಗ್ಗೆ ಅಪಪ್ರಚಾರ ಮಾಡ್ತಿದ್ದ ಕಾಂಗ್ರೆಸ್‌ನವರು ವ್ಯಾಕ್ಸಿನ್ ತೆಗೆದುಕೊಂಡು ಪೋಸ್ಟ್ ಹಾಕ್ತಿದ್ಧಾರೆ'
- ದೇಶದಲ್ಲಿ 18.5 ಕೋಟಿ ಲಸಿಕೆಯನ್ನು ಕಡಿಮೆ ಅವಧಿಯಲ್ಲಿ ನೀಡಲಾಗಿದೆ.
- ಬಿಜೆಪಿ ವ್ಯಾಕ್ಸಿನ್ ಎಂದು ಕಾಂಗ್ರೆಸ್ ಅಪಪ್ರಚಾರ
ಬೆಂಗಳೂರು (ಮೇ. 20): 'ದೇಶದಲ್ಲಿ 18.5 ಕೋಟಿ ಲಸಿಕೆಯನ್ನು ಕಡಿಮೆ ಅವಧಿಯಲ್ಲಿ ನೀಡಲಾಗಿದೆ. ಆದರೆ ಅದನ್ನ ಬಿಜೆಪಿ ವ್ಯಾಕ್ಸಿನ್ ಎಂದು ಕಾಂಗ್ರೆಸ್ ಅಪಪ್ರಚಾರ ಮಾಡಿತ್ತು. ಈಗ ಅವರೇ ವ್ಯಾಕ್ಸಿನ್ ತೆಗೆದುಕೊಂಡು ಪೋಸ್ಟ್ ಹಾಕುತ್ತಿದ್ದಾರೆ' ಎಂದು ಸಂಸದ ತೇಜಸ್ವಿ ಸೂರ್ಯ ವಾಗ್ದಾಳಿ ನಡೆಸಿದ್ದಾರೆ.
ಕೊರೊನಾ ಮಧ್ಯೆ ಟೂಲ್‌ಕಿಟ್ ಬಾಂಬ್: ಮೋದಿ ವಿರುದ್ಧ ಕುತಂತ್ರ? ಸೌಮ್ಯಾ ವರ್ಮಾ ಯಾರು?
ಲಸಿಕೆ ಉತ್ಪಾದನೆ, ಹಂಚಿಕೆ ಬಗ್ಗೆ ಕೇಂದ್ರ ಸರ್ಕಾರ, ಸಚಿವರು ಕೆಲಸ ಮಾಡುತ್ತಿದ್ದರೆ, ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದ್ದರು. ಕೋವಿಡ್ ಮೊದಲ ಅಲೆ ಪ್ರಾರಂಭಕ್ಕೂ ಮುನ್ನ ದೇಶದಲ್ಲಿ 2168 ಐಸಿಯು ಬೆಡ್‌ಗಳಿತ್ತು. ಈಗ 92 ಸಾವಿರ ಐಸಿಯು ಬೆಡ್‌ಗಳಿವೆ. ನರೇಂದ್ರ ಮೋದಿ ಏನ್ಮಾಡ್ತಿದ್ದಾರೆ ಎನ್ನುವವರು ಈ ಪ್ರಶ್ನೆಗೆ ಉತ್ತರ ಕೊಡಿ' ಎಂದು ವಾಗ್ದಾಳಿ ನಡೆಸಿದ್ಧಾರೆ.