ಮುಸ್ಲಿಮರನ್ನು ಮನೆಗೆ ಕರೆಸಿ ಹಂದಿ ಮಾಂಸ ಮಾಡಿ ಬಡಿಸಿ ನೋಡೋಣ, ಹಂಸಲೇಖ ವಿರುದ್ಧ ಪ್ರತಾಪ್ ಸಿಂಹ ಗರಂ!

ಪೇಜಾವರ ಶ್ರೀಗಳ ಬಗ್ಗೆ ನಾದಬ್ರಹ್ಮ ಹಂಸಲೇಖ ವಿವಾದಾತ್ಮವಾಗಿ ಮಾತನಾಡಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಹಂಸಲೇಖ ವಿರುದ್ಧ ಸಂಸದ ಪ್ರತಾಪ್ ಸಿಂಹ ಕೆಂಡಾಮಂಡಲರಾಗಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ನ. 15): ಪೇಜಾವರ ಶ್ರೀಗಳ (Pejawara Shri) ಬಗ್ಗೆ ನಾದಬ್ರಹ್ಮ ಹಂಸಲೇಖ (Hamsalekha ) ವಿವಾದಾತ್ಮವಾಗಿ ಮಾತನಾಡಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಹಂಸಲೇಖ ವಿರುದ್ಧ ಸಂಸದ ಪ್ರತಾಪ್ ಸಿಂಹ (Pratap Simha) ಕೆಂಡಾಮಂಡಲರಾಗಿದ್ದಾರೆ. 

ಪೇಜಾವರ ಶ್ರೀಗಳ ಬಗ್ಗೆ ಹಂಸಲೇಖ ವಿವಾದಾತ್ಮಕ ಹೇಳಿಕೆ, ದಲಿತರ ಜೊತೆ ನಾವಿದ್ದೇವೆ ಎಂದ ಶ್ರೀಗಳು

'ಬಡಿಸಿ. ಪೇಜಾವರ ಶ್ರೀಗಳು ಹಿಂದೂಧರ್ಮದಲ್ಲಿ ಸಮಾನತೆಯನ್ನು ತರಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಶ್ರೀಗಳ ಬಗ್ಗೆ ಮಾತನಾಡುವಾಗ ಪರಿಜ್ಞಾನ ಇರಬೇಕು. ಸಾಧು-ಸಂತರ ಅಹಾರ ಪದ್ಧತಿ ನಿಮಗೆ ಗೊತ್ತಿಲ್ಲವಾ.? ಆಹಾರ ಪದ್ಧತಿಯಿಂದ ಸಮಾನತೆ ಬರುತ್ತದೆ ಎನ್ನುವುದಾದರೆ ಮುಸ್ಲಿಂರನ್ನು ಮನೆಗೆ ಕರೆಸಿ ಹಂದಿ ಮಾಂಸ ಮಾಡಿ ಬಡಿಸಿ, ಅವರು ತಿಂತಾರಾ ನೋಡಿ. ಆಹಾರ ಪದ್ಧತಿಯನ್ನು ಅಸಮಂಬದ್ಧವಾಗಿ ಎಳೆದು ತಂದು ಯಾಕಾಗಿ ಈ ರೀತಿ ಮಾತನಾಡಿದ್ದೀರೋ ಗೊತ್ತಿಲ್ಲ, ಪ್ರಚಾರದ ಗೀಳೋ ಗೊತ್ತಾಗುತ್ತಿಲ್ಲ' ಎಂದಿದ್ದಾರೆ. 

Related Video