Asianet Suvarna News Asianet Suvarna News

ಪೇಜಾವರ ಶ್ರೀಗಳ ಬಗ್ಗೆ ಹಂಸಲೇಖ ವಿವಾದಾತ್ಮಕ ಹೇಳಿಕೆ, ದಲಿತರ ಜೊತೆ ನಾವಿದ್ದೇವೆ ಎಂದ ಶ್ರೀಗಳು

Nov 15, 2021, 11:45 AM IST

ಬೆಂಗಳೂರು (ನ. 15): ವೇದಿಕೆಯೊಂದರಲ್ಲಿ ನಾದಬ್ರಹ್ಮ ಹಂಸಲೇಖ ಅವರು, (Hamsalekha) ಪೇಜಾವರ ಶ್ರೀಗಳ (Pejawara Seer) ಬಗ್ಗೆ ಲಘುವಾಗಿ ಮಾತನಾಡಿರುವುದು ವಿವಾದಕ್ಕೀಡಾಗಿದೆ. ಹಂಸಲೇಖ  ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಈ ಬಗ್ಗೆ ಪೇಜಾವರ ಶ್ರೀಗಳು ಪ್ರತಿಕ್ರಿಯಿಸಿದ್ಧಾರೆ. 

' ಇಂತಹ ಮಾತುಗಳು ಹಂಸಲೇಖ ಬಾಯಿಂದ ಬರಬಾರದಿತ್ತು, ನಾವು ವಿರುದ್ಧ ನಾವು ಪ್ರತಿಭಟನೆ ನಡೆಸುವುದಿಲ್ಲ, ಅಭಿಮಾನದಿಂದ ಯಾರಾದರೂ ಪ್ರತಿಭಟಿಸಿದರೆ ಅದು ಅವರ ವೈಯಕ್ತಿಕ ವಿಚಾರ. ಗುರುಗಳು ಎಲ್ಲರ ಹೃದಯದಲ್ಲಿ ಕೃಷ್ಣನನ್ನು ಕಂಡಿದ್ದರು. ಎಲ್ಲರ ಉದ್ಧಾರವನ್ನು ಬಯಸಿದ್ದರು. ಯಾರೇ ಏನೋ ಹೇಳಿದರೆ ನಮ್ಮ ಗುರುಗಳ ಘನತೆ ಕಡಿಮೆಯಾಗುವುದಿಲ್ಲ' ಎಂದು ಈಗಿನ ಪೇಜಾವರ ಶ್ರೀಗಳು ಹೇಳಿದ್ದಾರೆ.