Asianet Suvarna News Asianet Suvarna News

ಮುಖ್ಯಮಂತ್ರಿಗಳೇ ಗಮನಿಸಿ; ಇಂದಿರಾ ಕ್ಯಾಂಟೀನ್ ಅವ್ಯವಸ್ಥೆ ಸರಿಪಡಿಸಿ

ಬಡವರ ಹಸಿವು ನೀಗಿಸುವ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ 'ಇಂದಿರಾ ಕ್ಯಾಂಟೀನ್‌' ನಲ್ಲಿ ಅವ್ಯವಸ್ಥೆ ಕಂಡು ಬಂದಿದೆ. ಬೆಂಗಳೂರಿನ ಬಹಳಷ್ಟು ಇಂದಿರಾ ಕ್ಯಾಂಟೀನ್‌ನಗಳಲ್ಲಿ ಕುಡಿಯುವ ಶುದ್ಧ ನೀರಿನ ಸಮಸ್ಯೆ ಎದುರಾಗಿದೆ. 

Dec 2, 2020, 1:54 PM IST

ಬೆಂಗಳೂರು (ಡಿ. 02): ಬಡವರ ಹಸಿವು ನೀಗಿಸುವ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ 'ಇಂದಿರಾ ಕ್ಯಾಂಟೀನ್‌' ನಲ್ಲಿ ಅವ್ಯವಸ್ಥೆ ಕಂಡು ಬಂದಿದೆ. ಬೆಂಗಳೂರಿನ ಬಹಳಷ್ಟು ಇಂದಿರಾ ಕ್ಯಾಂಟೀನ್‌ನಗಳಲ್ಲಿ ಕುಡಿಯುವ ಶುದ್ಧ ನೀರಿನ ಸಮಸ್ಯೆ ಎದುರಾಗಿದೆ. ಬಿಬಿಎಂಪಿ, ಜಲಮಮಡಳಿ ಹಾಗೂ ಗುತ್ತಿಗೆದಾರರ ನಡುವಿನ ತಿಕ್ಕಾಟದಿಂದ ಬಡವರ ಊಟಕ್ಕೆ ಸಮಸ್ಯೆಯಾಗುತ್ತಿದೆ. 

ಕ್ಯಾಂಟೀನ್‌ನಲ್ಲಿ ಅಡುಗೆ ಮಾಡಬೇಕೆಂದರೆ ಟ್ಯಾಂಕರ್ ಮೂಲಕ ನೀರು ತರಿಸಿಕೊಳ್ಳಬೇಕಾಗಿದೆ. ಬಿಬಿಎಂಪಿ, ಜಲಮಮಡಳಿ ಹಾಗೂ ಗುತ್ತಿಗೆದಾರರ ನಡುವಿನ ತಿಕ್ಕಾಟದಿಂದ ಬಡವರು ಎಲ್ಲಿಗೆ ಹೋಗಬೇಕು ಸ್ವಾಮಿ?