ಬೆಂಗಳೂರು ಪೊಲೀಸರ ಬೆನ್ನತ್ತಿದ ಕೊರೋನಾ ಭೂತ..!

ಬೆಂಗಳೂರೊಂದರಲ್ಲೇ 347 ಪೊಲೀಸರು ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಇದರ ಜೊತೆಗೆ ಐವರು ಪೊಲೀಸರನ್ನು ಕೊರೋನಾ ಬಲಿ ಪಡೆದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

Share this Video
  • FB
  • Linkdin
  • Whatsapp

ಬೆಂಗಳೂರು(ಜು.06): ಕೊರೋನಾ ಎನ್ನುವ ಹೆಮ್ಮಾರಿಗೆ ಜನಸಾಮನ್ಯರು ಮಾತ್ರವಲ್ಲ ಪೊಲೀಸ್ ಇಲಾಖೆ ಕೂಡಾ ಬೆಚ್ಚಿಬೀಳುವಂತಾಗಿದೆ. ಬೆಂಗಳೂರಿನಲ್ಲಿ ಒಂದೊಂದಾಗಿ ಪೊಲೀಸ್ ಠಾಣೆಗಳು ಸೀಲ್‌ಡೌನ್ ಆಗಲಾರಂಭಿಸಿವೆ.

ರಾಜ್ಯದ ಸೋಂಕಿತರಲ್ಲಿ ಬೆಂಗಳೂರಿನದ್ದೇ ಅರ್ಧಪಾಲು ..!

ಹೌದು, ಬೆಂಗಳೂರೊಂದರಲ್ಲೇ 347 ಪೊಲೀಸರು ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಇದರ ಜೊತೆಗೆ ಐವರು ಪೊಲೀಸರನ್ನು ಕೊರೋನಾ ಬಲಿ ಪಡೆದಿದೆ. ಬೆಂಗಳೂರಿನಲ್ಲಿರುವ 110 ಠಾಣೆಗಳ ಪೈಕಿ 29 ಪೊಲೀಸ್ ಸ್ಟೇಷನ್‌ಗಳು ಸೀಲ್‌ಡೌನ್ ಆಗಿವೆ. ಇನ್ನು ಎರಡು ಸಾವಿರಕ್ಕೂ ಅಧಿಕ ಮಂದಿ ಪೊಲೀಸರು ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Related Video