Asianet Suvarna News Asianet Suvarna News

ರಾಜ್ಯದ ಸೋಂಕಿತರಲ್ಲಿ ಬೆಂಗಳೂರಿನದ್ದೇ ಸಿಂಹಪಾಲು ..!

ರಾಜ್ಯದ ಕೊರೋನಾ ಸೋಂಕಿತರ ಪಟ್ಟಿಯಲ್ಲಿ ಅರ್ಧಪಾಲು ಬೆಂಗಳೂರಿನದ್ದು ಎನ್ನುವ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಸಿಲಿಕಾನ್ ಸಿಟಿಯಲ್ಲಿ ಸಿಕ್ಕಸಿಕ್ಕವರಿಗೆಲ್ಲಾ ಕೊರೋನಾ ಮಹಾಮಾರಿ ವಕ್ಕರಿಸಿಕೊಳ್ಳಲಾರಂಭಿಸಿದೆ. ಸದ್ಯ ಬೆಂಗಳೂರಿನಲ್ಲೇ ಕೊರೋನಾ ಪೀಡಿತರ ಸಂಖ್ಯೆ 9 ಸಾವಿರದ ಗಡಿ ದಾಟಿದೆ. 

ಬೆಂಗಳೂರು(ಜು.06): ಕೊರೋನಾ ಸುನಾಮಿಗೆ ರಾಜ್ಯ ರಾಜಧಾನಿ ಬೆಂಗಳೂರು ಅಕ್ಷರಶಃ ಬೆಚ್ಚಿಬಿದ್ದಿದೆ. ಕೊರೋನಾ ಹೆಚ್ಚಳ ವಿಚಾರದಲ್ಲಿ ರಾಜ್ಯದ್ದೇ ಒಂದು ಲೆಕ್ಕವಾದರೆ, ಬೆಂಗಳೂರಿನದ್ದು ಮತ್ತೊಂದು ಲೆಕ್ಕ ಎನ್ನುವಂತಾಗಿದೆ.

ಹೌದು, ರಾಜ್ಯದ ಕೊರೋನಾ ಸೋಂಕಿತರ ಪಟ್ಟಿಯಲ್ಲಿ ಅರ್ಧಪಾಲು ಬೆಂಗಳೂರಿನದ್ದು ಎನ್ನುವ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಸಿಲಿಕಾನ್ ಸಿಟಿಯಲ್ಲಿ ಸಿಕ್ಕಸಿಕ್ಕವರಿಗೆಲ್ಲಾ ಕೊರೋನಾ ಮಹಾಮಾರಿ ವಕ್ಕರಿಸಿಕೊಳ್ಳಲಾರಂಭಿಸಿದೆ. ಸದ್ಯ ಬೆಂಗಳೂರಿನಲ್ಲೇ ಕೊರೋನಾ ಪೀಡಿತರ ಸಂಖ್ಯೆ 9 ಸಾವಿರದ ಗಡಿ ದಾಟಿದೆ. ಬೆಂಗಳೂರಿನಲ್ಲಿ ದಿನವೊಂದರಲ್ಲಿ ಮೂರರಿಂದ ಮೂರುವರೆ ಸಾವಿರ ಸ್ಯಾಂಪಲ್ ಟೆಸ್ಟ್ ಮಾಡಲಾಗುತ್ತಿದೆ. ಟೆಸ್ಟ್ ಸಂಖ್ಯೆ ಹೆಚ್ಚಾದಂತೆ ಪಾಸಿಟಿವ್ ಸಂಖ್ಯೆಗಳು ಹೆಚ್ಚಾಗಲಾರಂಭಿಸಿದೆ. 

ಕೇರಳದಲ್ಲಿ ಮಾಸ್ಕ್‌, ಸಾಮಾಜಿಕ ಅಂತರ ಇನ್ನೂ 1 ವರ್ಷ ಕಡ್ಡಾಯ!

ಜುಲೈ 06ರ ಮುಂಜಾನೆ ವೇಳೆಗೆ ಬೆಂಗಳೂರಿನಲ್ಲಿ 9,580 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಸಂಜೆಯಾಗುವುದರೊಳಗಾಗಿ ಸೋಂಕಿತರ ಸಂಖ್ಯೆ 10 ಸಾವಿರದ ಗಡಿ ದಾಟುವುದು ಪಕ್ಕಾ ಎನಿಸಿದೆ. ಕಳೆದೊಂದು ವಾರದಲ್ಲೇ 5800ಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳು ಬೆಂಗಳೂರಿನಲ್ಲೇ ಪತ್ತೆಯಾಗಿದೆ. ಈ ಕುರಿತಾದ ಹೆಚ್ಚಿನ ಡೀಟೈಲ್ಸ್ ಇಲ್ಲಿದೆ ನೋಡಿ.