Asianet Suvarna News Asianet Suvarna News

ಜಿಟಿಜಿಟಿ ಮಳೆ, ಮೈ ನಡುಗಿಸುವ ಚಳಿ, ಬೆಚ್ಚನೆ ಮಲಗಿದೆ ಸಿಲಿಕಾನ್ ಸಿಟಿ!

Nov 13, 2021, 1:33 PM IST

ಬೆಂಗಳೂರು (ನ. 13): ರಾಜಧಾನಿಯಲ್ಲಿ ಒಂದೆಡೆ ಜಿಟಿಜಿಟಿ ಮಳೆ, ಇನ್ನೊಂದೆಡೆ ಮೈ ನಡುಗುವ ಚಳಿಯ ವಾತಾವರಣ ಕಂಡು ಬಂದಿದೆ. ಕಳೆದ ಎರಡ್ಮೂರು ದಿನಗಳಿಂದ ಬಿಸಿಲಿನ ದರ್ಶನವೇ ಆಗಿಲ್ಲ. ನಿರಂತರವಾಗಿ ಸುರಿದ ಜಿಟಿ ಜಿಟಿ ಮಳೆಯಿಂದಾಗಿ ಚಳಿ ಶಾಲಾ, ಕಾಲೇಜು, ಕಚೇರಿಗೆ ತೆರಳಲು ನಿರುತ್ತಸಾಹ ಕಂಡು ಬಂದಿತು. 

ಚಳಿಯಿಂದ ಪಾರಾಗಲು ಜನರು ಸ್ವೇಟರ್‌, ಬೆಚ್ಚನೆಯ ಬಟ್ಟೆಧರಿಸುವುದರ ಜೊತೆ ಜೊತೆಗೆ ಬಿಸಿಬಿಸಿ ಕಾಫಿ, ಚಹಾ ಮತ್ತು ಕುರುಕಲು ತಿಂಡಿಯ ಮೊರೆ ಹೋದರು. ಜನರ ಓಡಾಟ ಸಹ ಗಣನೀಯವಾಗಿ ಕಡಿಮೆಯಾಗಿತ್ತು. ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ನಗರದ ಮಾಪಕದಲ್ಲಿ ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು. ನಗರದಲ್ಲಿ ಇದೇ ರೀತಿಯ ಮಳೆ, ಚಳಿ, ಮೋಡ ಮತ್ತು ಮಂಜು ಕವಿದ ವಾತಾವರಣ ಇನ್ನೂ ನಾಲ್ಕೈದು ದಿನ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.