ಆರತಕ್ಷತೆ ದಿನ ನವಜೋಡಿಯಿಂದ ಮಹತ್ವದ ನಿರ್ಧಾರ; ಮಾದರಿಯಾಯ್ತು ನವಜೋಡಿಯ ನಡೆ

ಮದುವೆ ಆರತಕ್ಷತೆ ಅಂದ್ರೆ ಸಾಮಾನ್ಯವಾಗಿ ಉಡುಗೊರೆಗಳ ವಿನಿಮಯ, ಊಟ, ಮೋಜು, ಮಸ್ತಿ ಅಂತ ನೋಡುತ್ತೇವೆ. ಆದರೆ ಇದು ಸ್ವಲ್ಪ ಭಿನ್ನವಾದ ಮದುವೆ.  ನವಜೋಡಿ ಕುಟುಂಬಸ್ಥರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ದೇಹದಾನಕ್ಕೆ ಸಹಿ ಮಾಡಿ ಮಾದರಿಯಾಗಿದ್ದಾರೆ. 

First Published Nov 11, 2020, 4:49 PM IST | Last Updated Nov 11, 2020, 4:49 PM IST

ಕೊಡಗು (ನ. 11): ಮದುವೆ ಆರತಕ್ಷತೆ ಅಂದ್ರೆ ಸಾಮಾನ್ಯವಾಗಿ ಉಡುಗೊರೆಗಳ ವಿನಿಮಯ, ಊಟ, ಮೋಜು, ಮಸ್ತಿ ಅಂತ ನೋಡುತ್ತೇವೆ. ಆದರೆ ಇದು ಸ್ವಲ್ಪ ಭಿನ್ನವಾದ ಮದುವೆ.  ನವಜೋಡಿ ಕುಟುಂಬಸ್ಥರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ದೇಹದಾನಕ್ಕೆ ಸಹಿ ಮಾಡಿ ಮಾದರಿಯಾಗಿದ್ದಾರೆ. 

ಸಿದ್ದರಾಮಯ್ಯ ಭರ್ಜರಿ ಪ್ಲಾನ್: ಬೈ ಎಲೆಕ್ಷನ್‌ನಲ್ಲಿ 'ಜಾಣರಾಮಯ್ಯ' ಆದ್ರು..!

ಸೋಮವಾರ ಪೇಟೆಯ ಗೌತಮ್, ಅರಕಲಗೋಡುವಿನ ಸುಮನಾ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಆರತಕ್ಷತೆ ದಿನ ಕಾರ್ಯಕ್ರಮಕ್ಕೆ ಬಂದವರಿಗೆ ಒಂದೊಂದು ಸಸಿ, ಪುಸ್ತಕ ವಿತರಿಸಲಾಯಿತು. ನೇತ್ರದಾನದ ಬಗ್ಗೆಯೂ ಜಾಗೃತಿ ಮೂಡಿಸಲಾಯಿತು.