Asianet Suvarna News Asianet Suvarna News

MLC Election: ಬೆಳಗಾವಿಯಲ್ಲಿ ಸಿಎಂ ಮ್ಯಾರಾಥಾನ್ ಮೀಟಿಂಗ್, ಶಾಸಕರು, ಸಂಸದರಿಗೆ ಟಾಸ್ಕ್

Dec 8, 2021, 9:51 AM IST
  • facebook-logo
  • twitter-logo
  • whatsapp-logo

ಬೆಂಗಳೂರು (ಡಿ. 08): ಪರಿಷತ್ ಚುನಾವಣಾ ಕಣ (MLC Elections) ರಂಗೇರಿದೆ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್‌ ಪಕ್ಷಗಳ ತಂತ್ರ, ಪ್ರತಿತಂತ್ರ, ಪ್ರಚಾರ ಸಭೆಗಳು ಜೋರಾಗಿ ನಡೆಯುತ್ತಿದೆ. ಬೆಳಗಾವಿ (Belagavi) ಪರಿಷತ್ ಅಖಾಡ ಬಹಳ ಗಮನ ಸೆಳೆದಿದೆ. ಬೆಳಗಾವಿಯಲ್ಲಿ ಲಖನ್ ಜಾರಕಿಹೊಳಿ (Lakhan Jarakiholi) ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಇದು ಬಿಜೆಪಿಗೆ ದೊಡ್ಡ ಸವಾಲಾಗಿದೆ. ಹೀಗಾಗಿ ಸಿಎಂ ಬೊಮ್ಮಾಯಿ ಮೂವರು ಮುಖಂಡರ ಜೊತೆ ಮ್ಯಾರಾಥಾನ್ ಮೀಟಿಂಗ್ ನಡೆಸಿದ್ದಾರೆ. 

MLC Election: ಬೆಂಬಲಿಗರ ಸಭೆಯಲ್ಲೇ ಕಾಂಗ್ರೆಸ್‌ಗೆ ಬೆಂಬಲ ಘೋಷಿಸಿದ ಜೆಡಿಎಸ್ ಶಾಸಕ

ಉಮೇಶ್ ಕತ್ತಿ, ಲಕ್ಷ್ಮಣ ಸವದಿ ಹಾಗೂ ರಮೇಶ್ ಜಾರಕಿಹೊಳಿ (Ramesh Jarkiholi) ಜೊತೆ ಸಿಎಂ ಸಭೆ ನಡೆಸಿದ್ದಾರೆ. ಬಿಜೆಪಿ ಗೆಲ್ಲಿಸಲು ಶಕ್ತಿಮೀರಿ ಪ್ರಯತ್ನಿಸಿ ಎಂದಿದ್ದಾರೆ. ಬೆಳಗಾವಿ ಅಧಿವೇಶನದ ವೇಳೆ ರಿಸಲ್ಟ್ ಬರುತ್ತದೆ. ಆಗ ಪಕ್ಷಕ್ಕೆ ಮುಜುಗರವಾಗಬಾರದು. ಹೀಗಾಗಿ ಕ್ಷೇತ್ರದಲ್ಲಿ ಕೆಲಸ ಮಾಡಿ' ಎಂದು ಸಿಎಂ ಸೂಚನೆ ನೀಡಿದ್ದಾರೆ. 

 

Video Top Stories