ಪ್ರಚೋದನಕಾರಿ ಪೋಸ್ಟ್ ಹಾಕಿದ್ದೇ ಗಲಭೆಗೆ ಕಾರಣ ಎಂದ ಶಾಸಕ ಪ್ರಸಾದ್ ಅಬ್ಬಯ್ಯ
ಹುಬ್ಬಳ್ಳಿ ಮುಸ್ಲಿಂ ಪುಂಡರಿಂದ ಗಲಭೆ ಪ್ರಕರಣದ ಕುರತಾಗಿ ಮಾತನಾಡಿರುವ ಧಾರವಾಡ ಪೂರ್ವ ಕ್ಷೇತ್ರದ ಶಾಸಕ ಪ್ರಸಾದ್ ಅಬ್ಬಯ್ಯ, ಪ್ರಚೋದನಕಾರಿ ಪೋಸ್ಟ್ ಹಾಕಿದ್ದೇ ಗಲಭೆಗೆ ಕಾರಣ, ಫೇಸ್ ಬುಕ್ ನಲ್ಲಿ ಇಂಥ ಪೋಸ್ಟ್ ಹಾಕಿದ್ದ ಯುವಕನ ಹಿಂದೆ ಯಾರಿದ್ದಾರೆ ಎನ್ನುವುದು ತನಿಖೆಯಾಗಲಿ ಎಂದು ಹೇಳಿದ್ದಾರೆ.
ಬೆಂಗಳೂರು (ಏ.19): ಹುಬ್ಬಳ್ಳಿಯಲ್ಲಿ (Hubballi) ಮುಸ್ಲಿಂ ಪುಂಡರಿಂದ (Muslim Youths) ನಡೆದ ಗಲಭೆ ಪ್ರಕರಣದ ಕುರಿತಾಗಿ ಮಾತನಾಡಿರುವ ಧಾರವಾಡ ಪೂರ್ವ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ (Prasad Abbayya), ಪ್ರಚೋದನಕಾರಿ ಪೋಸ್ಟ್ (provocative post) ಹಾಕಿದ್ದೇ ಗಲಭೆಗೆ ಕಾರಣ ಎಂದು ಹೇಳಿದ್ದಾರೆ.
ಚುನಾವಣೆ ಹತ್ತಿರ ಬರುತ್ತಿರುವಂತೆ ಇಂಥ ಘಟನೆಗಳು ಯಾಕಾಗುತ್ತವೆ. ಫೇಸ್ ಬುಕ್, ವಾಟ್ಸ್ ಆಪ್ ನಲ್ಲಿ ನೂರೆಂಟು ಸುದ್ದಿ ಬರುತ್ತವೆ ಅದೆಲ್ಲವನ್ನೂ ನಾವು ನಂಬೋದಿಲ್ಲ. ಈ ಕುರಿತಂತೆ ಧಾರ್ಮಿಕ ಮುಖಂಡರನ್ನು ಕರೆದು ಸಭೆ ಮಾಡುತ್ತೇವೆ. ಯುವಕನ ಹಿಂದೆ ಯಾರಿದ್ದಾರೆ ಎನ್ನುವ ತನಿಖೆಯಾಗಲಿ ಎಂದು ಒತ್ತಾಯಿಸಿದ್ದಾರೆ.
ಹುಬ್ಬಳ್ಳಿ ಗಲಭೆಯಲ್ಲಿ ಕಾಂಗ್ರೆಸ್ ಪಕ್ಷದ ಕುಮ್ಮಕ್ಕು ಎಂದ ಕಟೀಲ್!
2009ರ ನಂತರ ಇಲ್ಲಿಯವರೆಗೂ ಅಹಿತಕರ ಘಟನೆಗಳು ಯಾವುದೂ ನಡೆದಿರಲಿಲ್ಲ. ಸಣ್ಣ ಪುಟ್ಟ ಗಲಾಟೆಗಳು ಆಗುತ್ತಿದ್ದವು. ಆಗ ಶಾಂತಿಸಭೆಯಾಗಿ ಎಲ್ಲವೂ ತಿಳಿಯಾಗುತ್ತಿತ್ತು. ಅದರಲ್ಲೂ ಇತ್ತೀಚೆಗೆ ಧಾರ್ಮಿಕ ಭಾವನೆಗಳನ್ನು ಕೆರಳಿಸುವಂಥ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿವೆ ಎಂದು ಹೇಳಿದ್ದಾರೆ.