ಸಿಎಂ ಜೊತೆ ಮಾತನಾಡಿದ್ದೇನೆ, ಸಮಸ್ಯೆ ಬಗೆಹರಿಸುವುದಾಗಿ ಭರವಸೆ: ಕುಮಾರ್ ಬಂಗಾರಪ್ಪ

ಕೇಂದ್ರ ಸರ್ಕಾರ ಶೇ. 100 ರಷ್ಟು ಚಿತ್ರಮಂದಿರ ಭರ್ತಿಗೆ ಅವಕಾಶ ನೀಡಿದ್ದರೂ, ರಾಜ್ಯ ಸರ್ಕಾರ ಶೇ. 50 ರಷ್ಟು ಭರ್ತಿಗೆ ಮಾತ್ರ ಅವಕಾಶ ನೀಡಿದೆ. 

First Published Feb 3, 2021, 6:13 PM IST | Last Updated Feb 3, 2021, 6:13 PM IST

ಬೆಂಗಳೂರು (ಫೆ. 03): ಕೇಂದ್ರ ಸರ್ಕಾರ ಶೇ. 100 ರಷ್ಟು ಚಿತ್ರಮಂದಿರ ಭರ್ತಿಗೆ ಅವಕಾಶ ನೀಡಿದ್ದರೂ, ರಾಜ್ಯ ಸರ್ಕಾರ ಶೇ. 50 ರಷ್ಟು ಭರ್ತಿಗೆ ಮಾತ್ರ ಅವಕಾಶ ನೀಡಿದೆ. ಸರ್ಕಾರದ ಈ ನಿಯಮ ಚಿತ್ರರಂಗಕ್ಕೆ ಶಾಕ್ ನೀಡಿದೆ. ಕೆಲವು ಚಿತ್ರಗಳು ರಿಲೀಸ್‌ಗೆ ರೆಡಿಯಾಗಿದ್ದು, ನಿರ್ಮಾಪಕರು, ನಿರ್ದೇಶಕರು, ಚಿತ್ರತಂಡ ಕಂಗಾಲಾಗಿದೆ. 

ಕೆಜಿಎಫ್ 2 ನಿಂದ ಅನಂತ್ ನಾಗ್ ಹೊರ ಬಂದಿದ್ದೇಕೆ.? ಏನು ರೀಸನ್

ಈ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಟ, ಹಾಗೂ ಶಾಸಕ ಕುಮಾರ್‌ ಬಂಗಾರಪ್ಪಗೆ ಮನವಿ ಮಾಡಿದ್ದಾರೆ. ' ಸಿಎಂ ಬಿಎಸ್‌ವೈ ಜೊತೆ ಮಾತನಾಡಿದ್ದೇನೆ. ಕೂಡಲೇ ಸ್ಪಂದಿಸಿದ್ದಾರೆ. ಚಿತ್ರರಂಗದ ಜೊತೆ ನಾವಿದ್ದೇವೆ ಎಂದು ಸಿಎಂ ಭರವಸೆ ನೀಡಿದ್ದಾರೆ. ಇಂದು ಸಂಜೆಯೊಳಗೆ ಪರಿಹಾರ ಒದಗಿಸಿ ಕೊಡುತ್ತಾರೆ ಎಂಬ ಭರವಸೆ ನನಗಿದೆ' ಎಂದು ಕುಮಾರ್ ಬಂಗಾರಪ್ಪ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ.