ನಿರ್ಗತಿಕರಿಗೆ ಫುಡ್ ಕಿಟ್ ವಿತರಣೆ; ಹಸಿದವರಿಗೆ ಅನ್ನದಾತರಾದ ಗೂಳಿಹಟ್ಟಿ ಶೇಖರ್

ಕೊರೋನಾ ಸಂಕಷ್ಟ ಸಮಯದಲ್ಲಿ ಯಾರೂ ಹಸಿವಿನಿಂದ ನರಳಬಾರದೆಂದು ಹೊಸದುರ್ಗ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ 6500 ಫುಡ್ ಕಿಟ್ ವಿತರಿಸಿದ್ದಾರೆ.  ಹೊಸದುರ್ಗ ಪಟ್ಟಣದಲ್ಲಿ ವಾಸವಿರುವ ನಿರ್ಗತಿಕರಿಗೆ ಫುಡ್ ಕಿಟ್ ವಿತರಣೆ ಮಾಡಿದ್ದಾರೆ. 
 

First Published Jun 11, 2021, 6:09 PM IST | Last Updated Jun 11, 2021, 6:56 PM IST

ಬೆಂಗಳೂರು (ಜೂ. 11): ಕೊರೋನಾ ಸಂಕಷ್ಟ ಸಮಯದಲ್ಲಿ ಯಾರೂ ಹಸಿವಿನಿಂದ ನರಳಬಾರದೆಂದು ಹೊಸದುರ್ಗ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ 6500 ಫುಡ್ ಕಿಟ್ ವಿತರಿಸಿದ್ದಾರೆ.  ಹೊಸದುರ್ಗ ಪಟ್ಟಣದಲ್ಲಿ ವಾಸವಿರುವ ನಿರ್ಗತಿಕರಿಗೆ ಫುಡ್ ಕಿಟ್ ವಿತರಣೆ ಮಾಡಿದ್ದಾರೆ.

ಕಲಾವಿದರಿಗೆ, ತಂತ್ರಜ್ಞರಿಗೆ ದಿನಸಿ ಕಿಟ್ ವಿತರಿಸಿದ ನಟ ನಕುಲ್ ಗೌಡ! 

ನಗರದ ವಾರ್ಡ್ವಾರು ಪಟ್ಟಿ ತಯಾರಿಸಿ ರೇಷನ್ ಕಿಟ್  ನೀಡಲಾಗುತ್ತಿದೆ.  ಒಂದು ದಿನಕ್ಕೆ 5 ವಾರ್ಡ್ ನಂತೆ ರೇಷನ್ ಕಿಟ್ ವಿತರಣೆ ಮಾಡ್ತಿದ್ದೀವಿ. ಕೊರೊನಾ‌ ನಿಯಮಗಳನ್ನು ಪಾಲನೆ ಮಾಡಿಯೇ ಕಿಟ್ ವಿತರಣೆ‌ ಮಾಡಿದ್ದೇವೆ. ಗ್ರಾಮೀಣ ಪ್ರದೇಶದಲ್ಲೂ ಅರ್ಹ ಫಲಾನುಭವಿಗಳ ಪಟ್ಟಿ ಕೇಳಿದ್ದೀವಿ. ಆ ರೀತಿಯ ನಿರ್ಗತಿಕರು ಕಂಡು ಬಂದಲ್ಲಿ ಗ್ರಾಮೀಣ ಪ್ರದೇಶಕ್ಕೂ ತೆರಳಿ ವಿತರಣೆ ಮಾಡಲಾಗುವುದು' ಎಂದು ಶಾಸಕ ಗೂಳಿಹಟ್ಟಿ ಶೇಖರ್ ಏಷ್ಯಾನೆಟ್ ಸುವರ್ಣನ್ಯೂಸ್‌ ಜೊತೆ ಮಾತನಾಡಿದ್ದಾರೆ.