Weekend Curfew: ಜನರನ್ನು ಸಂಕಷ್ಟಕ್ಕೆ ತಳ್ಳೋದ್ಯಾಕೆ? ಸಿ ಟಿ ರವಿ ವಿರೋಧ
ವೀಕೆಂಡ್ ಕರ್ಫ್ಯೂ (Weekend Curfew) ಲಾಕ್‌ಡೌನ್‌ಗೆ (Lockdown) ಬಿಜೆಪಿಯಿಂದಲೇ ವಿರೋಧ ವ್ಯಕ್ತವಾಗಿದೆ.
ಬೆಂಗಳೂರು (ಜ.19): ವೀಕೆಂಡ್ ಕರ್ಫ್ಯೂ (Weekend Curfew) ಲಾಕ್‌ಡೌನ್‌ಗೆ (Lockdown) ಬಿಜೆಪಿಯಿಂದಲೇ ವಿರೋಧ ವ್ಯಕ್ತವಾಗಿದೆ. ಲಾಕ್‌ಡೌನ್, ಕರ್ಫ್ಯೂ ಮಾಡಿದರೆ ಜನರಿಗೆ ತೊಂದರೆಯಾಗುತ್ತದೆ. ಜನರ ಜೀವನವನ್ನು ಸಂಕಷ್ಟಕ್ಕೆ ಯಾಕೆ ದೂಡಬೇಕು.? ಜೀವಕ್ಕೆ ಹಾನಿಯಾಗುತ್ತೆ ಅಂತಿದ್ರೆ ಲಾಕ್‌ಡೌನ್ ಮಾಡಬೇಕು. ಆದರೆ ಒಮಿಕ್ರೋನ್ ಅಷ್ಟಾಗಿ ಜೀವಕ್ಕೆ ಹಾನಿ ಮಾಡುವುದಿಲ್ಲ ಎಂದು ಸಿ ಟಿ ರವಿ ಹೇಳಿದ್ಧಾರೆ.
Weekend Curfew: ಕರ್ಫ್ಯೂ ಮಾಡೋದಾದ್ರೆ ಲಸಿಕೆ ಯಾಕ್ರೀ ಬೇಕು.? ಸಿಡಿದ ಪ್ರತಾಪ್ ಸಿಂಹ
ಸಂಸದ ಪ್ರತಾಪ್ ಸಿಂಹ ಕೂಡಾ ವೀಕೆಂಡ್ ಕರ್ಫ್ಯೂಗೆ ವಿರೋಧ ವ್ಯಕ್ತಪಡಿಸಿದ್ದಾರೆ. 'ನಮ್ಮ ರಾಜ್ಯದಲ್ಲಿ ಕೋವ್ಯಾಕ್ಸಿನ್, ಕೋವಿಶೀಲ್ಡ್ ಕೊಟ್ಟಾಗಿದೆ. ಈಗ ಬೂಸ್ಟರ್ ಡೋಸ್ ಬಂದಿದೆ. ಆಸ್ಪತ್ರೆಗಳಲ್ಲಿ ಬೇಕಾದ ವ್ಯವಸ್ಥೆ ಮಾಡಲಾಗಿದೆ. ಇಷ್ಟಿದ್ದೂ ಲಾಕ್‌ಡೌನ್, ಕರ್ಫ್ಯೂ ಅಂತ ಹೆದರಿಸೋದಾದ್ರೆ ಲಸಿಕೆ ಯಾಕೆ ಬೇಕಿತ್ತು..? ಜನರಿಗೆ ಅನಗತ್ಯವಾಗಿ ಉಪದ್ರ ಕೊಡಬೇಡಿ' ಎಂದು ಸಂಸದ ಪ್ರತಾಪ್ ಸಿಂಹ ಭರವಸೆ ವ್ಯಕ್ತಪಡಿಸಿದರು.