ಈಶ್ವರಪ್ಪ ತಲೆದಂಡ ಫಿಕ್ಸ್? ವಾಟ್ಸಪ್ ಮೆಸೇಜ್ ಬಗ್ಗೆ ಸಚಿವರಿಗೆ ಅನುಮಾನ!
* ಈಶ್ವರಪ್ಪ ರಾಜೀನಾಮೆ ಕೊಡ್ತಾರಾ? ಅಥವಾ ಅವರನ್ನ ಕಿತ್ತು ಹಾಕಲಾಗುತ್ತಾ?
* ಸಿಎಂ ಸೂಚಿಸಿದರೆ ರಾಜೀನಾಮೆ ನೀಡಲು ಸಿದ್ಧ
* ವಾಟ್ಸಪ್ ಮೆಸೇಜನ್ನು ಡೆತ್ ನೋಟ್ ಅಂತ ಎನ್ನಲಾಗದು
ಬೆಂಗಳೂರು(ಏ.12): ಸಚಿವ ಈಶ್ವರಪ್ಪ ತಲೆದಂಡ ಆಗೋದು ಫಿಕ್ಸ್ ಆಗಿದೆ. ಇಂದು ಅವರೇ ರಾಜೀನಾಮೆ ಕೊಡ್ತಾರಾ?, ಅಥವಾ ಅವರನ್ನ ಕಿತ್ತು ಹಾಕಲಾಗುತ್ತಾ? ಎಂಬ ಪ್ರಶ್ನೆಗಳು ಇದೀಗ ಉದ್ಭವಿಸಿವೆ. ಇದೀಗ ಸುವರ್ಣ ನ್ಯೂಸ್ ಜತೆ ಮಾತನಾಡಿದ ಈಶ್ವರಪ್ಪ ಅವರು, ಸಿಎಂ ಸೂಚಿಸಿದರೆ ರಾಜೀನಾಮೆ ನೀಡಲು ಸಿದ್ಧ ಅಂತ ಹೇಳಿದ್ದಾರೆ. ಒಬ್ಬ ಈಶ್ವರಪ್ಪರನ್ನ ಉಳಿಸಿಕೊಳ್ಳಲು ಸರ್ಕಾರವನ್ನೇ ಅಳಿಸಿಕೊಳ್ಳುವುದಕ್ಕೆ ಬಿಜೆಪಿ ಸಿದ್ಧವಿಲ್ಲ ಎಂದು ಹೇಳಲಾಗುತ್ತಿದೆ. ವಾಟ್ಸಪ್ ಮೆಸೇಜ್ ಬಗ್ಗೆ ಈಶ್ವರಪ್ಪ ಅವರಿಗೇ ಅನುಮಾನ ಮೂಡಿಸಿದೆ. ವಾಟ್ಸಪ್ ಮೆಸೇಜನ್ನು ಡೆತ್ ನೋಟ್ ಅಂತ ಎನ್ನಲಾಗದು. ಯಾರೂ ಬೇಕಾದರೂ ಈ ರೀತಿ ಬರೆಯಬಹುದು ಅಂತ ಹೇಳಿದ್ದಾರೆ.
ಸಂತೋಷ್ ಆತ್ಮಹತ್ಯೆ ಕೇಸ್: ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಕಾಂಗ್ರೆಸ್‌ಗೆ ಹೊಸ ಅಸ್ತ್ರ?