ದುಬಾರಿ ಶುಲ್ಕ: ಖಾಸಗಿ ಆಸ್ಪತ್ರೆ ವಿರುದ್ಧ ಮುಲಾಜಿಲ್ಲದೇ ಕ್ರಮವೆಂದ ಸಚಿವ ಸುಧಾಕರ್

ನಗರದ ಶೇಷಾದ್ರಿಪುರಂನಲ್ಲಿರುವ ಅಪೋಲೊ ಆಸ್ಪತ್ರೆ ಕೊರೋನಾ ಸೋಂಕಿತ ರೋಗಿಯೊಬ್ಬರಿಗೆ 5 ಲಕ್ಷ ರುಪಾಯಿ ಬಿಲ್ ಮಾಡಿರುವ ವಿಚಾರ ತಿಳಿಯುತ್ತಿದ್ದಂತೆ ಟ್ವೀಟ್ ಮಾಡಿರುವ ಸಚಿವ ಸುಧಾಕರ್, ಈಗಾಗಲೇ ಅನೇಕ ಬಾರಿ ಆ ಆಸ್ಪತ್ರೆಗೆ ವಾರ್ನ್ ಮಾಡಿದ್ದೇನೆ. ಆದರೂ ಇಂದು 5 ಲಕ್ಷ ರುಪಾಯಿ ಬಿಲ್ ಮಾಡಿರುವುದು ಕೇಳಿ ಆಘಾತವಾಯಿತು. ಅವರ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.
 
Share this Video
  • FB
  • Linkdin
  • Whatsapp

ಬೆಂಗಳೂರು(ಜು.29): ಕೊರೋನಾ ಚಿಕಿತ್ಸೆಗೆ ದುಬಾರಿ ಶುಲ್ಕ ವಿಧಿಸುತ್ತಿರುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಮುಲಾಜಿಲ್ಲದೇ ಕ್ರಮ ಜರುಗಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಎಚ್ಚರಿಕೆ ನೀಡಿದ್ದಾರೆ.

ನಗರದ ಶೇಷಾದ್ರಿಪುರಂನಲ್ಲಿರುವ ಅಪೋಲೊ ಆಸ್ಪತ್ರೆ ಕೊರೋನಾ ಸೋಂಕಿತ ರೋಗಿಯೊಬ್ಬರಿಗೆ 5 ಲಕ್ಷ ರುಪಾಯಿ ಬಿಲ್ ಮಾಡಿರುವ ವಿಚಾರ ತಿಳಿಯುತ್ತಿದ್ದಂತೆ ಟ್ವೀಟ್ ಮಾಡಿರುವ ಸಚಿವ ಸುಧಾಕರ್, ಈಗಾಗಲೇ ಅನೇಕ ಬಾರಿ ಆ ಆಸ್ಪತ್ರೆಗೆ ವಾರ್ನ್ ಮಾಡಿದ್ದೇನೆ. ಆದರೂ ಇಂದು 5 ಲಕ್ಷ ರುಪಾಯಿ ಬಿಲ್ ಮಾಡಿರುವುದು ಕೇಳಿ ಆಘಾತವಾಯಿತು. ಅವರ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.

ಗುಡ್‌ ನ್ಯೂಸ್: ಆಗಸ್ಟ್‌ನೊಳಗೆ ವಿಶ್ವದ ಮೊಟ್ಟ ಮೊದಲ ಕೊರೋನಾ ಲಸಿಕೆ ಬಿಡುಗಡೆ!

ಈ ಹಿಂದೆ ಸರ್ಕಾರದ ಸಚಿವರು ಎಚ್ಚರಿಕೆ ನೀಡಿದ್ದರೂ ಖಾಸಗಿ ಆಸ್ಪತ್ರೆಗಳು ಮಾತ್ರ ತಮ್ಮ ಹಳೇ ಚಾಳಿಯನ್ನೇ ಮುಂದುವರೆಸುತ್ತಿವೆ. ಇನ್ನಾದರೂ ಸರ್ಕಾರ ಇಂತಹ ಧನದಾಹಿ ಆಸ್ಪತ್ರೆಗಳ ವಿರುದ್ಧ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Related Video