ಮಾಸ್ಕೋ(ಜು.29): ಚೀನಾದಿಂದ ಹುಟ್ಟಿಕೊಂಡ ಕೊರೋನಾ ಸದ್ಯ ಇಡೀ ವಿಶ್ವದ ನೆಮ್ಮದಿ ಕದಡಿದೆ. ಹೀಗಿರುವಾಗ ಇದನ್ನು ಹೊಡೆದೋಡಿಸಬಲ್ಲ ಲಸಿಕೆ ಆವಿಷ್ಕರಿಸಲು ಎಲ್ಲಾ ರಾಷ್ಟ್ರಗಳು ಯತ್ನಿಸುತ್ತಿವೆ. ಈ ಪೈಪೋಟಿ ನಡುವೆ ಆಗಸ್ಟ್ ತಿಂಗಳ ಒಳಗೆ ಕೊರೋನಾ ವೈರಸ್ ಬಿಡುಗಡೆ ಮಾಡಲು ರಷ್ಯಾ ಮುಂದಾಗಿದೆ. ರಷ್ಯಾ ಕೊರೋನಾ ಲಸಿಕೆ ಬಿಡುಗಡೆ ಮಾಡಿದ ವಿಶ್ವದ ಮೊದಲ ರಾಷ್ಟ್ರವಾಗಲಿದೆ.

ಅಮೆರಿಕದಲ್ಲಿ 30,000 ಜನರ ಮೇಲೆ ಕೋವಿಡ್‌ ಲಸಿಕೆ: ಇದು ಅಂತಿಮ ಹಂತದ ಪ್ರಯೋಗ!

ಲಸಿಕೆಯೊಂದನ್ನು ರೋಗಿಗಳ ಸಾಮಾನ್ಯ ಬಳಕೆಗೆ ಲಭ್ಯವಾಗುವ ಮುನ್ನ ಹಲವು ಹಂತಗಳಲ್ಲಿ ಪರೀಕ್ಷೆಗೆ ಒಳಪಡಬೇಕು. ಪರೀಕ್ಷೆಯ ಫಲಿತಾಂಶ ಆಧರಿಸಿ ಆಯಾ ದೇಶಗಳ ಔಷಧ ನಿಯಂತ್ರಣ ಪ್ರಾಧಿಕಾರಗಳು ಮುಕ್ತ ಬಳಕೆಗೆ ಅವಕಾಶ ಕಲ್ಪಿಸಿಕೊಡಬೇಕು. ಆದರೆ ವಿಶ್ವದಲ್ಲೇ ಅತಿ ಹೆಚ್ಚು ಸೋಂಕಿತರ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿರುವ ರಷ್ಯಾ, ಪಿಡುಗಿನ ಭಾರೀ ತೀವ್ರತೆ ಹಿನ್ನೆಲೆಯಲ್ಲಿ ಮೂರು ಮತ್ತು ಕಡೆಯ ಹಂತದ ಪರೀಕ್ಷೆಗೂ ಮುನ್ನವೇ ಲಸಿಕೆಯನ್ನು ಬಳಕೆಗೆ ಬಿಡುಗಡೆ ಮಾಡಲು ನಿರ್ಧರಿಸಿದೆ.

ಇನ್ನು ಮಾಸ್ಕೋ ಮೂಲದ ಗಮಾಲೆಯಾ ಸಂಸ್ಥೆ ಅಭಿವೃದ್ಧಿಪಡಿಸಿರುವ ಈ ಲಸಿಕೆಗೆ ಆಗಸ್ಟ್‌ 10ಕ್ಕೂ ಮೊದಲೇ ರೋಗಿಗಳ ಸಾಮಾನ್ಯ ಬಳಕೆ ಮಾಡಲು ಒಪ್ಪಿಗೆ ಸಿಗಲಿದೆ ಎಂಬುವುದು ಅಧಿಕಾರಿಗಳ ಭರವಸೆಯಾಗಿದೆ. ಇನ್ನು ಒಪ್ಪಿಗೆ ಪಡೆದ ಕೂಡಲೇ ಇದರ ಬಳಕೆ ಆರಂಭಿಸುವಾಗಿ ಹೇಳಿರುವ ಅಧಿಕಾರಿಗಳು, ಕೊರೋನಾವಾರಿಯರ್‌ಗಳಿಗೆ ಮಟ್ಟ ಮೊದಲು ನೀಡುವುದಾಗಿ ಘೋಷಿಸಿದೆ. 

ಸರ್ಕಾರದ ಮೂಲಕ ಕೊರೋನಾ ಲಸಿಕೆ ವಿತರಣೆ, ಖಾಸಗಿ ಆಸ್ಪತ್ರೆಗಿಲ್ಲ ಔಷಧಿ!

ಆದರೆ ರಷ್ಯಾ ಇದುವರೆಗೂ ತಾನು ಅಭಿವೃದ್ಧಿಪಡಿಸಿರುವ ಲಸಿಕೆಯ ಹೆಸರನ್ನು ಬಹಿರಂಗಪಡಿಸಿಲ್ಲ. ಅಲ್ಲದೇ ಪ್ರಯೋಗದಲ್ಲಿ ಸಿಕ್ಕ ಫಲಿತಾಂಶವನ್ನೂ ಬಹಿರಂಗಪಡಿಸಿಲ್ಲ. ಹೀಗಿರುವಾಗ ಈ ಲಸಿಕೆಯಿಂದಾಗುವ ಅಡ್ಡ ಪರಿಣಾಮಗಳೇನು ಎಂಬುವುದು ಮಾತ್ರ ತಿಳಿದು ಬಂದಿಲ್ಲ