Asianet Suvarna News Asianet Suvarna News

ಕೆಇಎ ಬಳಿ ಕಾದು ಕುಳಿತಿದ್ದ ವಿದ್ಯಾರ್ಥಿಗಳಿಗೆ ಸರ್‌ಪ್ರೈಸ್‌: ಸಮಸ್ಯೆ ಆಲಿಸಿದ ಸಚಿವ ಎಂ.ಸಿ. ಸುಧಾಕರ್‌

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮುಂದೆ ತಮ್ಮ ಸಮಸ್ಯೆಯ ಬುತ್ತಿ ಹೊತ್ತು ಪರಿಹಾರ ಸಿಗಬಹುದು ಅನ್ನುವ ನಿರೀಕ್ಷೆಯ ಮೇರೆಗೆ ನಿತ್ಯ ಸಾವಿರಾರು ವಿದ್ಯಾರ್ಥಿಗಳು ಸೇರುತ್ತಲೇ ಇರ್ತಾರೆ. ಆದ್ರೆ ನಿನ್ನೆ KEA ಗೇಟ್ ಬಳಿ ಕಾದು ಕುಳಿತಿದ್ದ ವಿದ್ಯಾರ್ಥಿಗಳಿಗೆ ಸರ್ಪ್ರೈಸ್ ಒಂದು ಕಾದಿತ್ತು. ಆ ಸರ್ಪ್ರೈಸ್ ಏನು ಗೊತ್ತಾ? 
 

ಬೆಂಗಳೂರು ಮಾತ್ರವಲ್ಲ , ರಾಜ್ಯದ ಮೂಲೆ ಮೂಲೆಯಿಂದ ವಿದ್ಯಾರ್ಥಿಗಳು(Students) ಸಮಸ್ಯೆಗಳ ಪಟ್ಟಿ ಹೊತ್ತು ಪ್ರಾಧಿಕಾರದ ಮುಂದೆ ಬಂದಿದ್ದಾರೆ. ಇದು ಪ್ರತಿನಿತ್ಯವೂ KEA ಮುಂದೆ ಕಾಣಸಿಗುವ ದೃಶ್ಯ. ಹತ್ತಾರು ಸಮಸ್ಯೆ ಹೊತ್ತು ಬರುವ ಇವರಿಗೆ ನಿತ್ಯ  ಯಾವುದೇ ಉತ್ತರ ಸಿಗದೆ ನಿರಾಸೆ ಆಗ್ತಾ ಇತ್ತು. ಆದ್ರೆ ನಿನ್ನೆ ಖುದ್ದು ಉನ್ನತ ಶಿಕ್ಷಣ ಸಚಿವ ಡಾ. ಎಂಸಿ ಸುಧಾಕರ್(Minister Dr. MC Sudhakar) KEA ಗೆ ಭೇಟಿ ನೀಡಿ ಇವರ ಅಹವಾಲು ಆಲಿಸಿದ್ರು. ಬೆಳಿಗ್ಗೆ 10.30ಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಬಂದ ಸಚಿವರು ಮಧ್ಯಾಹ್ನ 2 ಗಂಟೆಯವರೆಗೂ ಸ್ಥಳದಲ್ಲೇ ಇದ್ದು ಸಮಸ್ಯೆ ಅಲಿಸಿದ್ರು. ಮೆಡಿಕಲ್, ಇಂಜಿನಿಯರಿಂಗ್ ಏಕಕಾಲಕ್ಕೆ ಕೌನ್ಸೆಲಿಂಗ್ ಆರಂಭ ಮಾಡಲಾಗಿತ್ತು. ಆದ್ರೆ  ರಿಜಿಸ್ಟ್ರೇಷನ್ ಪ್ರಕ್ರಿಯೆಯಲ್ಲಿ ಹಲವು ವಿದ್ಯಾರ್ಥಿಗಳು ತಪ್ಪು ಮಾಡಿದ್ದರು. ಸೀಟ್ ಅಲಾಟ್ ಆದ ಮೇಲೆ ಆ ಕಾಲೇಜು ಬೇಡ ಈ ಕಾಲೇಜು ಬೇಡ ಎಂದರೆ.. ಮತ್ತೆ ಕೆಲವರು ತಮಗೆ ಅಲಾಟ್ ಆಗಿರುವ ಸೀಟ್ ಬೇಡ ಹಣ ವಾಪಾಸ್ ಕೊಡಿ ಎನ್ನುವ ಬೆಡಿಕೆ ಇಟ್ಟಿದ್ದಾರೆ. ಇದೆಲ್ಲ ಸಮಸ್ಯೆಗಳನ್ನೂ ಸಚಿವರು ಆಲಿಸಿದ್ರು. ಆದ್ರೆ ಸಮಸ್ಯೆಗೆ ಸಚಿವರು ಕೂಡ ಪರಿಹಾರ ಕೊಡುವ ಬಗ್ಗೆ ಮೌನ ಮುರಿಯಲಿಲ್ಲ.. ಬದಲಾಗಿ ಹೆಚ್ಚುವರಿ ಸೀಟ್ ಕೆಲವೊಂದು ಕಾಂಬಿನೇಷನ್ಲ್ಲಿ ಉಳಿದು ಕೊಂಡಿದೆ ಅಂತ ಬೇಸರ ವ್ಯಕ್ತಪಡಿಸಿದರು.ಇನ್ನು ವಿದ್ಯಾರ್ಥಿಗಳಿಗೆ, ಪೋಷಕರಿಗೆ ದೊಡ್ಡ ತಲೆನೋವಾಗಿದ್ದು 5 ಟೈಮ್ ಪೆನಾಲ್ಟಿ ವಿಚಾರ. ಅಂದ್ರೆ ಒಬ್ಬ ವಿದ್ಯಾರ್ಥಿ ಯಾವುದಾದರೂ ಕಾಲೇಜು ಆಯ್ಕೆ ಮಾಡಿಕೊಂಡಾಗ , ವಿದ್ಯಾರ್ಥಿಗೆ ಆ ಕಾಲೇಜು ಹಿಡಿಸದೇ ಹೋದ್ರೆ ಮತ್ತೆ ಆ ಸೀಟು ಕೈ ಬಿಡುವ ಆಯ್ಕೆಯನ್ನು ಉನ್ನತ ಶಿಕ್ಷಣ ಇಲಾಖೆ ಕೊಟ್ಟಿಲ್ಲ. ಒಂದೊಮ್ಮೆ ವಿದ್ಯಾರ್ಥಿ ಕಾಲೇಜು ಬದಲಾವಣೆ ಮಾಡಲೇ ಬೇಕಾದ್ರೆ 5 ಸಲ ಆ ಕೋರ್ಸ್ಗೆ ಪೆನಾಲ್ಟಿ ಕಟ್ಟಬೇಕಾಗುತ್ತದೆ.. ಇದು ಪೋಷಕರ ಕೆಂಗಣ್ಣಿಗೆ ಕಾರಣ ಆಗಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಹೆಚ್ಚೆಚ್ಚು ಅರಿವು ಮೂಡಿಸುವ ಕೆಲಸ ಮಾಡ್ತೀವಿ ಅಂತಾ ಸಚಿವರು ಸಮಜಾಯಿಷಿ ನೀಡಿದ್ರಂತೆ. 

ಇದನ್ನೂ ವೀಕ್ಷಿಸಿ:  ಮಂಗಳೂರು ದಸರಾದಲ್ಲಿ ದೈವಗಳ ಸ್ತಬ್ಧಚಿತ್ರಕ್ಕೆ ಬ್ರೇಕ್: ಡಿಜೆಗೆ ನಿಷೇಧ.. ಭಜನಾ ತಂಡಗಳಿಗೆ ಅವಕಾಶ

Video Top Stories