ರಾಜ್ಯದ ಹಲವೆಡೆ ಜೋರಾಗಲಿದೆ ಮಳೆ; ಕೇಂದ್ರ ಹವಾಮಾನ ಇಲಾಖೆ ಎಚ್ಚರಿಕೆ

ಕಳೆದ ತಿಂಗಳಷ್ಟೇ ಭಾರೀ ಮಳೆಗೆ ತತ್ತರಿಸಿದ್ದ ರಾಜ್ಯದಲ್ಲಿ ಮತ್ತೊಮ್ಮೆ ಮಹಾಮಳೆಯ ಆರ್ಭಟ ಶುರುವಾಗಿದೆ. ಆಗಸ್ಟ್-ಸೆಪ್ಟೆಂಬರ್‌ ತಿಂಗಳಿನಲ್ಲಿ ಉತ್ತರ ಕರ್ನಾಟಕ, ಕರಾವಳಿ, ಮಲೆನಾಡು ಭಾಗದಲ್ಲಿ ಸುರಿದ ಭಾರೀ ಮಳೆಗೆ ನೆರೆ ಸಂಭವಿಸಿತ್ತು. ಇದೀಗ, ಕೇಂದ್ರ ಹವಾಮಾನ ಇಲಾಖೆ ಮತ್ತೆ ಭಾರೀ ಮಳೆಯ ಮುನ್ಸೂಚನೆ ನೀಡಿದೆ. ಇಲ್ಲಿದೆ ವಿವರ...

First Published Oct 21, 2019, 1:27 PM IST | Last Updated Oct 21, 2019, 1:27 PM IST

ಬೆಂಗಳೂರು (ಅ.21): ಕಳೆದ ತಿಂಗಳಷ್ಟೇ ಭಾರೀ ಮಳೆಗೆ ತತ್ತರಿಸಿದ್ದ ರಾಜ್ಯದಲ್ಲಿ ಮತ್ತೊಮ್ಮೆ ಮಹಾಮಳೆಯ ಆರ್ಭಟ ಶುರುವಾಗಿದೆ. ಆಗಸ್ಟ್-ಸೆಪ್ಟೆಂಬರ್‌ ತಿಂಗಳಿನಲ್ಲಿ ಉತ್ತರ ಕರ್ನಾಟಕ, ಕರಾವಳಿ, ಮಲೆನಾಡು ಭಾಗದಲ್ಲಿ ಸುರಿದ ಭಾರೀ ಮಳೆಗೆ ನೆರೆ ಸಂಭವಿಸಿತ್ತು.

ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಶುರುವಾಗಿದೆ. ರಾಜ್ಯದ ಹಲವು ಕಡೆಗಳಿಂದ ಮಳೆ ಅವಾಂತರದ ಸುದ್ದಿಗಳು ವರದಿಯಾಗುತ್ತಿವೆ.     

ಇದೀಗ, ಕೇಂದ್ರ ಹವಾಮಾನ ಇಲಾಖೆಯು ಕೂಡಾ ಭಾರೀ ಮಳೆಯ ಮುನ್ಸೂಚನೆ ನೀಡಿದೆ. ಎಲ್ಲೆಲ್ಲಿ, ಯಾವಾಗ ಮಳೆಯಾಗಲಿದೆ? ಇಲ್ಲಿದೆ ವಿವರ...