Asianet Suvarna News Asianet Suvarna News

Mekedatu Project: ಕಾಂಗ್ರೆಸ್‌ಗೆ ಬದ್ಧತೆಯಿಲ್ಲ, ಜನರನ್ನು ಮರುಳು ಮಾಡ್ತಿದ್ದಾರೆ: ಸಿಎಂ ಬೊಮ್ಮಾಯಿ

ಆಡಳಿತಾರೂಢ ಬಿಜೆಪಿ (BJP) ಸರ್ಕಾರಕ್ಕೆ ಸಡ್ಡು ಹೊಡೆದು' ನಮ್ಮ ನೀರು, ನಮ್ಮ ಹಕ್ಕು' ಘೋಷವಾಕ್ಯದೊಂದಿಗೆ ಮೇಕೆದಾಟು ಯೋಜನೆಗೆ (Mekedatu Project) ಕಾಂಗ್ರೆಸ್ ಚಾಲನೆ ನೀಡಿದೆ. 
 

ಬೆಂಗಳೂರು (ಜ. 09): ಆಡಳಿತಾರೂಢ ಬಿಜೆಪಿ (BJP) ಸರ್ಕಾರಕ್ಕೆ ಸಡ್ಡು ಹೊಡೆದು' ನಮ್ಮ ನೀರು, ನಮ್ಮ ಹಕ್ಕು' ಘೋಷವಾಕ್ಯದೊಂದಿಗೆ ಮೇಕೆದಾಟು ಯೋಜನೆಗೆ (Mekedatu Project) ಕಾಂಗ್ರೆಸ್ ಚಾಲನೆ ನೀಡಿದೆ. 

ರಾಮನಗರ, ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ನಗರ ಸೇರಿದಂತೆ ಒಕ್ಕಲಿಗ ಪ್ರಾಬಲ್ಯದ ಜಿಲ್ಲೆಗಳ ಮೂಲಕ 169 ಕಿ.ಮೀ ದೂರ ಹಾದುಹೋಗುವ ಈ ಪಾದಯಾತ್ರೆಗೆ ಆಡಳಿತಾರೂಢ ಬಿಜೆಪಿ ಹಾಗೂ  ಜೆಡಿಎಸ್‌ ತೀವ್ರ ಆಕ್ಷೇಪ ಎತ್ತಿವೆ. 

Shiva Rajkumar: ಕಾಂಗ್ರೆಸ್ ನಡೆಸುತ್ತಿರುವ ಮೇಕೆದಾಟು ಪಾದಯಾತ್ರೆಗೆ ಹೋಗಲ್ಲ

'ಕಾಂಗ್ರೆಸ್ 5 ವರ್ಷ ಅಧಿಕಾರದಲ್ಲಿದ್ದರೂ ಡಿಪಿಆರ್‌ನ್ನು (DPR) ಸರಿಯಾಗಿ ಸಬ್‌ಮಿಟ್‌ ಮಾಡಿಲ್ಲ. ಕಾಂಗ್ರೆಸ್‌ಗೆ ನೀರಾವರಿ ಯೋಜನೆಗಳ ಬಗ್ಗೆ ಬದ್ಧತೆ ಇಲ್ಲ. ಚುನಾವಣೆ ಹತ್ತಿರ ಬಂದಿದೆ ಎಂದು ಪಾದಯಾತ್ರೆ ಮಾಡುತ್ತಿದ್ದಾರೆ. ನಾವು ಕೆಲಸ ಮಾಡಿಲ್ಲ ಎಂಬ ಅಪರಾಧಿ ಭಾವ ಕಾಡುತ್ತಿದೆ. ಹೀಗಾಗಿ ಜನರನ್ನು ಮರಳು ಮಾಡುವ ಕೆಲಸ ಮಾಡುತ್ತಿದ್ದಾರೆ. ಜನ ಇದಕ್ಕೆಲ್ಲಾ ಮರುಳಾಗುವುದಿಲ್ಲ' ಎಂದು ಸಿಎಂ ಬೊಮ್ಮಾಯಿ (CM Bommai) ಹೇಳಿದ್ದಾರೆ. 

Video Top Stories