Asianet Suvarna News Asianet Suvarna News

Mekedatu Padayatre: ನೀರಿಗಾಗಿ ಅಲ್ಲ ಸಿಎಂ ಕುರ್ಚಿಗಾಗಿ, ಸಿದ್ದರಾಮಯ್ಯರನ್ನು ಡಮ್ಮಿ ಮಾಡುವ ಕುತಂತ್ರ'

'ನಮ್ಮ ನೀರು, ನಮ್ಮ ಹಕ್ಕು' ಘೋಷವಾಕ್ಯದೊಂದಿಗೆ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ (Mekedatu Padayatre) ಮುಂದುವರೆಸಿದೆ. ಕೋವಿಡ್ ನಿಯಮ ಉಲ್ಲಂಘಿಸಿ ಪಾದಯಾತ್ರೆ ನಡೆಸಿದ್ದಕ್ಕೆ ಕಾಂಗ್ರೆಸ್ ನಾಯಕರ ಮೇಲೆ ಎಫ್‌ಐಆರ್ ದಾಖಲಾಗಿದೆ. ಪಾದಯಾತ್ರೆಗೆ ಯಾಕೆ ಅವಕಾಶ ಕೊಟ್ಟಿರಿ ಎಂದು ಸರ್ಕಾರಕ್ಕೆ ಹೈಕೋರ್ಟ್ ಛಾಟಿ ಬೀಸಿದೆ. 

ಬೆಂಗಳೂರು (ಜ. 12): 'ನಮ್ಮ ನೀರು, ನಮ್ಮ ಹಕ್ಕು' ಘೋಷವಾಕ್ಯದೊಂದಿಗೆ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ (Mekedatu Padayatre) ಮುಂದುವರೆಸಿದೆ. ಕೋವಿಡ್ ನಿಯಮ ಉಲ್ಲಂಘಿಸಿ ಪಾದಯಾತ್ರೆ ನಡೆಸಿದ್ದಕ್ಕೆ ಕಾಂಗ್ರೆಸ್ ನಾಯಕರ ಮೇಲೆ ಎಫ್‌ಐಆರ್ (FIR) ದಾಖಲಾಗಿದೆ. ಪಾದಯಾತ್ರೆಗೆ ಯಾಕೆ ಅವಕಾಶ ಕೊಟ್ಟಿರಿ ಎಂದು ಸರ್ಕಾರಕ್ಕೆ ಹೈಕೋರ್ಟ್ (High Court) ಛಾಟಿ ಬೀಸಿದೆ. 

Mekedatu Padayatre: ಮೇಕೆದಾಟು ಯೋಜನೆಗೆ ಪಟ್ಟು ಹಿಡಿದಿದ್ಯಾಕೆ ಡಿಕೆಶಿ..?

ಮೇಕೆದಾಟು ಯೋಜನೆ ಆರಂಭಿಸಿದ್ದೇ ಬಿಜೆಪಿ ಸರ್ಕಾರ ಇದ್ದಾಗ. ಕಾಂಗ್ರೆಸ್‌ ಇಂತಹ ಎಷ್ಟೇ ಪಾದಯಾತ್ರೆ ಮಾಡಿದರೂ 2023ಕ್ಕೆ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದಿಲ್ಲ. ಕೋವಿಡ್‌ ಸಂಕಷ್ಟಕಾಲದಲ್ಲಿ ಜವಾಬ್ದಾರಿ ಮರೆತು ಕಾಂಗ್ರೆಸ್‌ ಮೇಕದಾಟು ಹೆಸರಲ್ಲಿ ಮತ ಯಾತ್ರೆ ನಡೆಸುತ್ತಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಟೀಕಿಸಿದರು.

ಕಾಂಗ್ರೆಸ್ ಏನೇ ಮಾಡಿದರೂ ಮೇಕೆದಾಟು ಯೋಜನೆ ಅನುಷ್ಠಾನಗೊಳಿಸಲು ಸಾಧ್ಯವಿಲ್ಲ. ಅದು ಸಾಧ್ಯವಾಗೋದು ಬಿಜೆಪಿಯಿಂದ ಮಾತ್ರ. ಸಿದ್ದರಾಮಯ್ಯನವರನ್ನು ಡಮ್ಮಿ ಮಾಡಲು ಡಿಕೆಶಿ ಹೊರಟಿದ್ದಾರೆ ಎಂದು ಅಶ್ವತ್ಥ್ ನಾರಾಯಣ್ ವಾಗ್ದಾಳಿ ನಡೆಸಿದರು.