BIG 3 Hero: ವೃಕ್ಷಪ್ರೇಮಿ, ಅನಾಥಬಂಧು, ಬಡವರ ಪಾಲಿನ ದೇವತೆ, ಇವರ ಸಾಧನೆಗೆ ಸಲಾಂ!

ನಮ್ಮ ನಡುವೆ ಸಾಕಷ್ಟು ಜನ ಸದ್ದಿಲ್ಲದೇ ಸಾಧನೆ ಮಾಡುತ್ತಿದ್ದಾರೆ. ಸಮಾಜಕ್ಕೆ, ಜನರಿಗೆ ಒಳಿತಾಗುವ ಕಾಯಕವನ್ನು ಮಾಡುತ್ತಿದ್ದಾರೆ. ಕೆಲವರು ಬೆಳಕಿಗೆ ಬಂದರೆ ಇನ್ನು ಕೆಲವರು ಎಲೆ ಮರೆಯ ಕಾಯಿಯಂತಿದ್ದಾರೆ. ಅಂತವರನ್ನು ಸಮಾಜಕ್ಕೆ ಪರಿಚಯಿಸುವ ಕೆಲಸ ಮಾಡುತ್ತಿದೆ ಬಿಗ್ 3. ಶಿವಮೊಗ್ಗದ ಮಂಗಳಮುಖಿ ವೈಷ್ಣವಿ, ತುಮಕೂರಿನ ಸಿದ್ಧಪ್ಪ, 
 

First Published Jun 4, 2022, 1:47 PM IST | Last Updated Jun 4, 2022, 4:01 PM IST

ಬೆಂಗಳೂರು (ಜೂ. 04): ನಮ್ಮ ನಡುವೆ ಸಾಕಷ್ಟು ಜನ ಸದ್ದಿಲ್ಲದೇ ಸಾಧನೆ ಮಾಡುತ್ತಿದ್ದಾರೆ. ಸಮಾಜಕ್ಕೆ, ಜನರಿಗೆ ಒಳಿತಾಗುವ ಕಾಯಕವನ್ನು ಮಾಡುತ್ತಿದ್ದಾರೆ. ಕೆಲವರು ಬೆಳಕಿಗೆ ಬಂದರೆ ಇನ್ನು ಕೆಲವರು ಎಲೆ ಮರೆಯ ಕಾಯಿಯಂತಿದ್ದಾರೆ. ಅಂತವರನ್ನು ಸಮಾಜಕ್ಕೆ ಪರಿಚಯಿಸುವ ಕೆಲಸ ಮಾಡುತ್ತಿದೆ ಬಿಗ್ 3. ಶಿವಮೊಗ್ಗದ ಮಂಗಳಮುಖಿ ವೈಷ್ಣವಿ, ತುಮಕೂರಿನ ಸಿದ್ಧಪ್ಪ. 

BIG 3 Hero: 14 ಸಾವಿರಕ್ಕೂ ಹೆಚ್ಚು ಬೇವಿನ ಮರ ಬೆಳೆಸಿದ ತುಮಕೂರಿನ ವೃಕ್ಷಪ್ರೇಮಿ ಸಿದ್ಧಪ್ಪ!

ತುಮಕೂರು ನಗರದ ನಿವಾಸಿ ಸಿದ್ದಪ್ಪ ಕಳೆದ 13 ವರ್ಷಗಳಿಂದ ಗಿಡಗಳನ್ನು ಬೆಳೆಸುವ ಹವ್ಯಾಸ ಇಟ್ಟುಕೊಂಡಿದ್ದಾರೆ. ಇದುವರೆಗೂ ಸುಮಾರು 14 ಸಾವಿರ ಮರಗಳನ್ನು ಬೆಳೆಸಿದ ವೃಕ್ಷಪ್ರೇಮಿ ಇವರು. 

ಶಿವಮೊಗ್ಗದ ಮಂಗಳಮುಖಿ ವೈಷ್ಣವಿ ಎಂಬುವವರ ಸಮಾಜಮುಖಿ ಕೆಲಸಗಳಿಂದ ಜನರ ಬಂಧು ಎನಿಸಿಕೊಂಡಿದ್ದಾರೆ. ಬಡಮಕ್ಕಳ ಶಾಲಾ ಶುಲ್ಕ, ಪಠ್ಯಪುಸ್ತಕ, ಪೆನ್, ಪುಸ್ತಕಗಳನ್ನು ವೈಷ್ಣವಿ ಕೊಡಿಸುತ್ತಾರೆ. ರಾಜಕಾರಣಿಗಳು, ಅಧಿಕಾರಿಗಳನ್ನು ಭೇಟಿಯಾಗಿ ರಸ್ತೆ, ಒಳಚರಂಡಿ, ಕುಡಿಯುವ ನೀರಿನ ವ್ಯವಸ್ಥೆ ಮಾಡಿಸಿದ್ದಾರೆ. 

ಮೂಡಿಗೆರೆಯ ಪಿ ಕೆ ಅಹಮದ್ ಎನ್ನುವವರು 300 ಕ್ಕೂ ಹೆಚ್ಚು ಅನಾಥ ಶವಗಳಿಗೆ ಅಂತ್ಯಸಂಸ್ಕಾರ ಮಾಡಿದ್ದಾರೆ, ಕೋವಿಡ್ ಸಮಯದಲ್ಲಿ ಸಾಕಷ್ಟು ಸಹಾಯ ಮಾಡಿದ್ದಾರೆ.