Asianet Suvarna News Asianet Suvarna News

ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದಿಂದ ಹಿಂದೆ ಸರಿದ ಎಂ ಬಿ ಪಾಟೀಲ್

Sep 3, 2021, 3:35 PM IST

ಬೆಂಗಳೂರು (ಸೆ. 03): ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟಕ್ಕೆ ಬ್ರೇಕ್ ಬಿದ್ದಿದೆ.  'ಪ್ರತ್ಯೇಕ ಧರ್ಮದ ಹೋರಾಟವೂ ಇಲ್ಲ, ಕೂಗು ಇಲ್ಲ. ಈ ಹೋರಾಟದಿಂದ ನಾನೇ ಎರಡು ಹೆಜ್ಜೆ ಹಿಂದೆ ಸರಿದಿದ್ದೇನೆ. ಈ ಬಾರಿ ವೀರಶೈವರು, ಲಿಂಗಾಯತರು ಒಟ್ಟಾಗಿ ಹೋಗುತ್ತೇವೆ. ಪ್ರತ್ಯೇಕ ಧರ್ಮ ಹೋರಾಟಕ್ಕೂ, ಕಾಂಗ್ರೆಸ್‌ಗೂ ಸಂಬಂಧವಿಲ್ಲ' ಎಂದು ಎಂಬಿ ಪಾಟೀಲ್ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟಪಡಿಸಿದ್ದಾರೆ. 

ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟಕ್ಕೂ ಕಾಂಗ್ರೆಸ್‌ಗೂ ಯಾವುದೇ ಸಂಬಂಧ ಇಲ್ರಿ: ಎಂಬಿಪಾ

ಈ ಹಿಂದೆ ವೀರಶೈವ, ಲಿಂಗಾಯತ ಎಂದು ಬೇರೆ ಮಾಡಲು ಹೊರಟಿದ್ದಾರೆ ಅಂತ ನನ್ನ ಮೇಲೆ ಆರೋಪ ಮಾಡಿದ್ದರು. ವೀರಶೈವ, ಲಿಂಗಾಯತ ಎಲ್ಲರು ಒಟ್ಟಾಗಿ ಹೋಗಿ ನಾವು ಮುನ್ನಡೆಯಬೇಕು ಎಂದು ನಾನು ಹೇಳಿದ್ದೇನೆ. ಸಮಾಜಕ್ಕೆ ಒಳ್ಳೆಯಕ್ಕೆ ಏನೆಲ್ಲ ಕೆಲಸ ಮಾಡಬೇಕು ಆ ನಿಟ್ಟಿನಲ್ಲಿ ಮುನ್ನಡೆಯಬೇಕಾಗಿದೆ. ಚುನಾವಣೆಯ ನಂತರ ವೀರಶೈವ ಲಿಂಗಾಯತ, ಪಂಚಪೀಠದ ಸ್ವಾಮೀಜಿಗಳು ಒಳಗೊಂಡು ಒಟ್ಟಾಗಿ ಚರ್ಚಿಸುತ್ತೇವೆ ಎಂದಿದ್ದಾರೆ.