Asianet Suvarna News Asianet Suvarna News

ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟಕ್ಕೂ ಕಾಂಗ್ರೆಸ್‌ಗೂ ಯಾವುದೇ ಸಂಬಂಧ ಇಲ್ರಿ: ಎಂಬಿಪಾ

Sep 3, 2021, 12:51 PM IST

ಬೆಂಗಳೂರು (ಸೆ.03): ಪ್ರತ್ಯೇಕ ಧರ್ಮ ಹೋರಾಟಕ್ಕೂ ಕಾಂಗ್ರೆಸ್‌ಗೂ ಯಾವುದೇ ಸಂಬಂಧ ಇಲ್ಲ. ಚುನಾವಣೆ ನಂತರ ಎಲ್ಲರೂ ಒಟ್ಟಾಗಿ ಚರ್ಚಿಸಿ ನಿರ್ಧರಿಸುತ್ತೇವೆ ಎಂದು ಸುದ್ದಿಗೋಷ್ಠಿ ನಡೆಸಿ ಎಂ ಬಿ ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ. 

ಎಂ ಬಿ ಪಾಟೀಲ್ ಹೇಳಿಕೆ ಕಾಂಗ್ರೆಸ್‌ಗೆ ಮುಜುಗರ ತರುತ್ತಿದೆಯಲ್ಲಾ ಎಂಬ ಪ್ರಶ್ನೆಗೆ, ನಾನು ಡಿಕೆಶಿ, ಸಿದ್ದರಾಮಯ್ಯನವರ ಜೊತೆ ಮಾತನಾಡಿದ್ದೇನೆ. ಎಂ ಬಿ ಪಾಟೀಲ್ ಹೇಳಿಕೆ ಬಗ್ಗೆ ನನಗೆ ಗೊತ್ತಿಲ್ಲ, ಅವರನ್ನೇ ಕೇಳಿ ಎಂದಿರುವುದರಲ್ಲಿ ತಪ್ಪೇನೂ ಇಲ್ಲ' ಎಂದು ಸಮರ್ಥನೆ ನೀಡಿದ್ದಾರೆ. 

'ಈ ಹಿಂದೆ ವೀರಶೈವ ಲಿಂಗಾಯತ ಡಿವೈಡ್ ಮಾಡಲು ಹೊರಟಿದ್ದಾರೆ ಅಂತ ನನ್ನ ಮೇಲೆ ಆರೋಪ ಮಾಡಿದ್ದರು. ವೀರಶೈವ, ಲಿಂಗಾಯತ ಎಲ್ಲರು ಒಟ್ಟಾಗಿ ಹೋಗಿ ನಾವು ಮುನ್ನಡೆಯಬೇಕು ಎಂದು ನಾನು ಹೇಳಿದ್ದೇನೆ..
ವೀರಶೈವ ಲಿಂಗಾಯತ ಒಟ್ಟಾಗಬಾರದಾ..? ಎಂದು ಪ್ರಶ್ನಿಸಿದ್ದಾರೆ.