Asianet Suvarna News Asianet Suvarna News

ಆಂಜನೇಯ ಹುಟ್ಟಿದ್ದು ಎಲ್ಲಿ? ಮಹಾರಾಷ್ಟ್ರದಿಂದ ಹೊಸ ವಾದ!

ರಾಮ ಭಕ್ತ ಹನುಮ ಹುಟ್ಟಿದ ಸ್ಥಳ ಯಾವುದು? ಕರ್ನಾಟಕವೂ ಅಲ್ಲ, ಆಂಧ್ರವೂ ಅಲ್ಲ ಅಂತಿದೆ ಮಹಾರಾಷ್ಟ್ರ! ಆಂಜನೇಯನ ಜನ್ಮಸ್ಥಳದ ಬಗ್ಗೆ ಮಹಾರಾಷ್ಟ್ರದ ಹೊಸ ವಾದವೇನು?

ಕೊಪ್ಪಳ (ಜೂ.01): ಆಂಜನೇಯನ ಜನ್ಮಸ್ಥಳದ ಕುರಿತ ವಿವಾದ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ಇತ್ತೀಚಿಗಷ್ಟೇ ತಿರುಪತಿಯ ಅಂಜನಾದ್ರಿಯಲ್ಲಿ ಆಂಜನೇಯನ ಜನ್ಮವಾಗಿದೆ ಎಂದು ಟಿಟಿಡಿ ಕ್ಯಾತೆ ತಗೆದಿತ್ತು.ಇದೀಗ ಮಹಾರಾಷ್ಟ್ರ ಕಿರಿಕ್ ತೆಗೆದಿದ್ದು, ಅಂಜನೇರಿ ಆಂಜನೇಯನ ಜನ್ಮಸ್ಥಳ ಎಂದು ವಾದಿಸುತ್ತಿದೆ. ಆದರೆ ನಮ್ಮ‌ವರು ಮಾತ್ರ ಅಂಜನಾದ್ರಿಯೇ ಆಂಜನೇಯನ‌ ಜನ್ಮಸ್ಥಳ ಎಂದು ಪ್ರತಿಪಾದಿಸುತ್ತಿದ್ದಾರೆ. 

ಆಂಜನೇಯನ ಜನ್ಮಸ್ಥಳದ ವಿವಾದವೇನು?: ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಪ್ರದೇಶ ಅಂದರೆ ತಟ್ಟನೆ ನೆನಪಾಗುವುದು ಆಂಜನೇಯನ ಜನ್ಮಸ್ಥಳ ಎಂದು. ಪುರಾಣ ಕಾಲದಿಂದಲೂ ಅಂಜನಾದ್ರಿಯಲ್ಲಿಯೇ ಆಂಜನೇಯನ ಜನ್ಮವಾಗಿದೆ ಎನ್ನುವ ಐತಿಹ್ಯ ಇದೆ. ಅಷ್ಟೇ ಅಲ್ಲ ಜನರ ನಂಬಿಕೆಯೂ ಸಹ ಇದ್ದು, ಇತಿಹಾಸ ತಜ್ಞರ ಪ್ರಕಾರವೂ ಸಜ ಕಿಷ್ಕಿಂದಾ ಪ್ರದೇಶವಾದ ಅಂಜನಾದ್ರಿಯೇ ಆಂಜನೇಯಮ ಜನ್ಮಸ್ಥಳ ಎಂದು ಹೇಳುತ್ತಾ ಬಂದಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಆಂಜನೇಯನ ಜನ್ಮಸ್ಥಳದ ಕುರಿತು ಪಕ್ಕದ ರಾಜ್ಯಗಳು ಕ್ಯಾತೆ ತೆಗೆಯುತ್ತಿವೆ. 

UPSC ಎಕ್ಸಾಂ ಪಾಸ್ ಆದ ಬಳಿಕವೇ ಮದುವೆ ಅಂದ್ರಿದ್ರು ನನ್ನ ತಾಯಿ: ಟಾಪರ್ ಅರುಣಾ

ಮೊದಲನೆಯದಾಗಿ ಆಂಧ್ರಪ್ರದೇಶದ ತಿರುಪತಿ ಬಳಿ ಇರುವ ಅಂಜನಾದ್ರಿ ಆಂಜನೇಯನ ಜನ್ಮಸ್ಥಳ ಎಂದು ಟಿಟಿಡಿ ವಾದಿಸಿತ್ತು. ಅಷ್ಟೇ ಅಲ್ಲ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಅಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಸಹ ಮಾಡಲು ಟಿಟಿಡಿ ಮುಂದಾಗಿದೆ. ಇದು ಮುಗಿಯುವ ಹೊತ್ತಿಗೆ ಇದೀಗ ಮಹಾರಾಷ್ಟ್ರ ರಾಜ್ಯವೂ ಸಹ ಆಂಜನೇಯನ ಜನ್ಮಸ್ಥಳ ಅಂಜನೇರಿ ಎಂದು ಕ್ಯಾತೆ ತೆಗೆದಿದೆ.‌ಆದರೆ ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶದ ರಾಜ್ಯಗಳ ಈ ವಾದಕ್ಕೆ ರಾಜ್ಯದ ಇತಿಹಾಸಕಾರರು ವಿರೋಧ ವ್ಯಕ್ತಪಡಿಸಿದ್ದು, ಆಂಜನೇಯನ ಜನ್ಮಸ್ಥಳ ನಮ್ಮ‌ ಅಂಜನಾದ್ರಿಯೇ ಎಂದು ಪ್ರತಿಪಾದಿಸಿದ್ದಾರೆ. ಹೆಚ್ಚಿನ  ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.

Video Top Stories