UPSC ಎಕ್ಸಾಂ ಪಾಸ್ ಆದ ಬಳಿಕವೇ ಮದುವೆ ಅಂದ್ರಿದ್ರು ನನ್ನ ತಾಯಿ: ಟಾಪರ್ ಅರುಣಾ
ಕೇಂದ್ರ ಲೋಕಸೇವಾ ಆಯೋಗ ನಡೆಸಿದ 2021ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯಲ್ಲಿ ಆಯ್ಕೆಯಾದ 685 ಅಭ್ಯರ್ಥಿಗಳ ಪೈಕಿ ರಾಜ್ಯದ 32 ಅಭ್ಯರ್ಥಿಗಳು ಇದ್ದಾರೆ. ತುಮಕೂರಿನ ಶಿರಾ ತಾಲೂಕಿನ ಅರುಣಾ ಎಂ 308 ನೇ ರ್ಯಾಂಕ್ ಪಡೆದಿದ್ದಾರೆ.
ಕೇಂದ್ರ ಲೋಕಸೇವಾ ಆಯೋಗ (UPSC) ನಡೆಸಿದ 2021ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯಲ್ಲಿ ಆಯ್ಕೆಯಾದ 685 ಅಭ್ಯರ್ಥಿಗಳ ಪೈಕಿ ರಾಜ್ಯದ 32 ಅಭ್ಯರ್ಥಿಗಳು ಇದ್ದಾರೆ. ತುಮಕೂರಿನ (Tumakuru) ಶಿರಾ ತಾಲೂಕಿನ ಅರುಣಾ ಎಂ (Aruna M) 308 ನೇ ರ್ಯಾಂಕ್ ಪಡೆದಿದ್ದಾರೆ.
ಸೋಲುಗಳೇ ಯಶಸ್ಸಿನ ಮೆಟ್ಟಿಲು, ಇದು ನನ್ನ 7 ನೇ ಅಟೆಂಪ್ಟ್: ಯುಪಿಎಸ್ಸಿ ಟಾಪರ್ ದೀಪಕ್ ಶೇಟ್
'ಆರೇಳು ಬಾರಿ ಪರೀಕ್ಷೆ ಬರೆದಿದ್ದೆ. ಆದರೂ ಆಯ್ಕೆಯಾಗಲೇಬೇಕೆಂಬ ಛಲ ಬಿಡದೆ, ಹಟ ತೊಟ್ಟು ಕೊನೆಯ ಪ್ರಯತ್ನದಲ್ಲಿ ಆಯ್ಕೆಯಾಗಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ. ಪರೀಕ್ಷೆಯ ಸಿಲೆಬಸ್ ತುಂಬಾ ಇರುತ್ತದೆ. ಹಾಗಾಗಿ ಸಂಪೂರ್ಣವಾದ ಬದ್ಧತೆಯೊಂದಿಗೆ, ಕಠಿಣ ಅಭ್ಯಾಸ ಮಾಡಬೇಕಾಗುತ್ತದೆ. ಮನೆಯವರಿಂದ ನೈತಿಕ ಮತ್ತು ಆರ್ಥಿಕ ಬೆಂಬಲ ಸಿಕ್ಕಿದ್ದರಿಂದಲೇ ಆಯ್ಕೆಯಾಗಿದ್ದೇನೆ. 3 ಬಾರಿ ನನ್ನ ಆರೋಗ್ಯ ಸಮಸ್ಯೆ ಇಂದಾಗಿ ಪರೀಕ್ಷೆ ಸರಿಯಾಗಿ ಬರಿಯೋಕೆ ಆಗಿಲ್ಲ. ಇಷ್ಟು ಬಾರಿ ನಾನು ಪರೀಕ್ಷೆ ಬರೆದ್ರೂ ಸಹ ನಾನು ಯಾವತ್ತೂ ಧೃತಿಗೆಡಲಿಲ್ಲ ಪಾಸ್ ಆಗಿಯೇ ಆಗ್ತೀನಿ, ಐಎಎಸ್ ಅಧಿಕಾರಿ ಆಗ್ತೀನಿ ಅನ್ನೋ ಛಲ ನನ್ನಲ್ಲಿತ್ತು. ನಾನು ಇಷ್ಟು ವರ್ಷ ಪಟ್ಟ ಶ್ರಮಕ್ಕೆ ಇಂದು ಸಾರ್ಥಕತೆ ಸಿಕ್ಕಿದೆ. ನಂಗೆ ಈಗ 32 ವರ್ಷ ವಯಸ್ಸು, ಆದ್ರೂ ಕೂಡ ನಮ್ಮ ಮನೇಲಿ ನನ್ನ ಮದುವೆ ವಿಷ್ಯ ಮಾತಾಡಿಲ್ಲ. ನಮ್ಮ ಮಗಳು upsc ಪಾಸ್ ಆಗ್ಲಿ ಆಮೇಲೆ ಮದುವೆ ಬಗ್ಗೆ ಯೋಚನೆ ಮಾಡೋಣ ಅಂತ ತಾಯಿ ಹೇಳ್ತಿದ್ರು. ಮನೆಯವರ ಸಪೋರ್ಟ್ ಬಹಳ ದೊಡ್ಡದು' ಎಂದು ಅರುಣಾ ಹೇಳಿದರು.