Asianet Suvarna News Asianet Suvarna News

Ram Mandir: ಸಕ್ಕರೆ ನಾಡಿಗೂ ಶ್ರೀರಾಮನಿಗೂ ಇದೆ ಸಂಬಂಧ..! ಬಾಣದಿಂದಲೇ ಸೃಷ್ಟಿಸಿದ ಧನುಷ್ಕೋಟಿ..!

ಅಯೋಧ್ಯೆಯ ಶ್ರೀರಾಮನಿಗೂ ಸಕ್ಕರೆ ನಾಡು ಮಂಡ್ಯ ಹಾಗೂ ಮೈಸೂರಿಗೂ ನಂಟಿದೆ. 14 ವರ್ಷಗಳ ವನವಾಸದ ವೇಳೆ ಸೀತಾಮಾತೆ,ಲಕ್ಷ್ಮಣನೊಂದಿಗೆ ಶ್ರೀರಾಮ ಮೇಲುಕೋಟೆಗೆ ಬಂದಿದ್ದನಂತೆ. ಅಷ್ಟೇ ಅಲ್ಲದೇ ಮೈಸೂರಿನಲ್ಲಿ ಶ್ರೀರಾಮನ ಹಾಗೂ ಸೀತೆಯ ಕುರುಹುಗಳಿವೆ. ಹಾಗಾದ್ರೆ ಮಂಡ್ಯ ಹಾಗೂ ಮೈಸೂರಿನಲ್ಲಿ ಶ್ರೀರಾಮನ ಪಯಣ ಹೇಗಿತ್ತು ಬನ್ನಿ ನೋಡೋಣ..

ಶ್ರೀರಾಮಚಂದ್ರ ಭರತ ಖಂಡದಾದ್ಯಂತ ಸಂಚರಿಸಿದ್ದ ಎಂಬುದಕ್ಕೆ ಹತ್ತು ಹಲವು ಕುರುಹುಗಳು ನಮ್ಮ ನಡುವೆಯಿದ್ದು, ಆತನ ಪಾದಸ್ಪರ್ಶದ ಸ್ಥಳಗಳು ಇಂದಿಗೂ ಪರಮ ಪುಣ್ಯ ಸ್ಥಳವಾಗಿ ಪೂಜಿಸಲ್ಪಡುತ್ತಿದೆ. ಇವತ್ತು ನಮ್ಮ ರಾಜ್ಯದಲ್ಲಿ ರಾಮನೊಂದಿಗೆ(Lord Rama) ನೇರ ಸಂಬಂಧ ಹೊಂದಿದ ಹತ್ತು ಹಲವು ಸ್ಥಳಗಳಿದ್ದು, ಪ್ರತಿ ಸ್ಥಳವೂ ತೇತ್ರಾಯುಗದ ರಾಮಾಯಣ(Ramayana) ಮತ್ತು ರಾಮನೊಂದಿಗೆ ಬೆರೆತುಕೊಂಡಿರುವುದು ಕಾಣಿಸುತ್ತಿದೆ. ಮೇಲುಕೋಟೆಯಲ್ಲಿರುವ(Melukote) ಧನುಷ್ಕೋಟಿ(Dhanushkoti) ಬಗ್ಗೆ ತಿಳಿಯುತ್ತಾ ಹೋದಂತೆ ರಾಮನಿಗೂ ಮೇಲುಕೋಟೆಗೂ ಇರುವ ನಂಟಿನ ಬಗ್ಗೆ ಗೊತ್ತಾಗುತ್ತೆ. ಅಯೋಧ್ಯೆಯಿಂದ ವನವಾಸಕ್ಕೆ ಸೀತೆ ಲಕ್ಷ್ಮಣರೊಂದಿಗೆ 14 ವರ್ಷಗಳ ಕಾಲ ವನವಾಸಕ್ಕೆ ತೆರಳಿದ ಶ್ರೀರಾಮ ಎಲ್ಲೆಡೆ ಸುತ್ತಾಡಿದ್ದನು. ಈತ ಎಲ್ಲೆಲ್ಲಿಗೆ ಹೋಗಿದ್ದನೋ ಆ ಸ್ಥಳಗಳು ಪುಣ್ಯ ಕ್ಷೇತ್ರವಾಗಿವೆ.

ರಾಮ ಸೀತೆಯರ ದೇವಸ್ಥಾನಕ್ಕೆ ಹೋದ್ರೆ, ರಾಮನ ಎಡ ಭಾಗದಲ್ಲಿ ಸೀತೆ ಇರೋದನ್ನ ನೋಡಿದ್ದೀವಿ. ಆದ್ರೆ, ಈ ದೇವಸ್ಥಾನದಲ್ಲಿ ಶ್ರೀರಾಮನ ಬಲಭಾಗದಲ್ಲಿ ಸೀತಾಮಾತೆಯನ್ನ ಕಾಣಬಹುದಾಗಿದೆ. ಈ ರೀತಿ ಭಕ್ತರಿಗೆ ರಾಮ ಹಾಗೂ ಸೀತೆ ದರ್ಶನ ನೀಡೋದಕ್ಕೆ ಒಂದು ಕಾರಣವಿದೆ.ಇದು ಮೈಸೂರಿನ(Mysore) ಕೆ.ಆರ್. ನಗರ ತಾಲೂಕಿನ ಚುಂಚನಕಟ್ಟೆ(chunchanakatte) ಗ್ರಾಮದಲ್ಲಿರುವ ಶ್ರೀ ರಾಮ ದೇವಸ್ಥಾನ. ಇಲ್ಲಿ ಸೀತಾಮಾತೆಯು ರಾಮನ ಬಲ ಭಾಗದಲ್ಲಿ ನಿಂತು ಭಕ್ತರಿಗೆ ದರ್ಶನ ನೀಡೋದೆ ಇಲ್ಲಿನ ವಿಶೇಷ. ಈ ಹಿಂದೆ ವನವಾಸದ ಸಮಯದಲ್ಲಿ ಶ್ರೀ ರಾಮ, ಸೀತೆ, ಲಕ್ಷ್ಮಣ ಚುಂಚನಕಟ್ಟೆಗೆ ಆಗಮಿಸಿದ್ದರು. ಈ ಸಮಯದಲ್ಲಿ ಚುಂಚನಕಟ್ಟೆಯಲ್ಲಿಯೇ ತೃಣಬಿಂದು ಮಹರ್ಷಿಗಳು ಬೀಡು ಬಿಟ್ಟಿರುತ್ತಾರೆ. ಅದೇ ಸಂದರ್ಭಕ್ಕೆ ಚುಂಚನಕಟ್ಟೆಯಲ್ಲಿ ಲಕ್ಷ್ಮಣ ಸೀತಾಮಾತೆಯ ಸ್ನಾನಕ್ಕಾಗಿ ಸೀತೆ ಮಡುವನ್ನು ನಿರ್ಮಿಸಿರುತ್ತಾನೆ. ಇದರ ನೀರನ್ನ ಹರಿಯುವಂತೆ ಮಾಡು ಎಂದು ಮಹರ್ಷಿಗಳು ಶ್ರೀರಾಮನನ್ನ ಕೇಳಿಕೊಳ್ಳುತ್ತಾರೆ. ಅಷ್ಟೇ ಅಲ್ಲ, ಸೀತಾಮಾತೆಯನ್ನು ಬಲಭಾಗದಲ್ಲಿರಿಸಿ ದರ್ಶನ ನೀಡುವಂತೆಯೂ ಶ್ರೀರಾಮನಿಗೆ ನಿವೇದಿಸಿಕೊಳ್ಳುತ್ತಾರೆ.

ಇದನ್ನೂ ವೀಕ್ಷಿಸಿ:  ರಾಮಮಂದಿರ ಧ್ವಂಸ ಬಳಿಕ ಕಠೋರ ಪ್ರತಿಜ್ಞೆ ಮಾಡಿದ್ದ ಕುಟುಂಬ, 500 ವರ್ಷದ ಬಳಿಕ ಅಂತ್ಯ!