Asianet Suvarna News Asianet Suvarna News

ತುಮಕೂರಿನ ಪಾವಗಡದಲ್ಲೂ ತಬ್ಲೀಘಿ ಟೆನ್ಷನ್; ಕ್ವಾರಂಟೈನ್‌ಗೆ ಸ್ಥಳೀಯರ ವಿರೋಧ..!

May 6, 2020, 5:12 PM IST

ತುಮಕೂರು(ಮೇ.06): ತುಮಕೂರಿನ ಪಾವಗಡದಲ್ಲೂ ತಬ್ಲೀಘಿಗಳ ಟೆನ್ಷನ್ ಆರಂಭವಾಗಿದೆ. ಗುಜರಾತ್‌ನಿಂದ ಬಂದು ಚಿತ್ರದುರ್ಗದಲ್ಲಿ ಪತ್ತೆಯಾಗಿದ್ದ 32 ತಬ್ಲೀಘಿಗಳನ್ನು ತುಮಕೂರಿನ ಪಾವಗಡದಲ್ಲಿ ಕ್ವಾರಂಟೈನ್‌ಗೆ ವಿರೋಧ ವ್ಯಕ್ತವಾಗಿದೆ.

ವೈ.ಎನ್ ಹೊಸಕೋಟೆಯ ಲೇಡಿಸ್ ಹಾಸ್ಟೆಲ್‌ನಲ್ಲಿ ಈ ತಬ್ಲೀಘಿಗಳನ್ನು ಕ್ವಾರಂಟೈನ್ ಮಾಡಲು ಜಿಲ್ಲಾಡಳಿತ ಮುಂದಾಗಿತ್ತು. ಆದರೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರು. ಆ ಬಳಿಕ ತಹಸೀಲ್ದಾರ್ ಮನವೊಲಿಕೆ  ಬಳಿಕ ತಬ್ಲೀಘಿಗಳ ತಪಾಸಣೆಗೊಳಪಡಿಸಲಾಯಿತು.

ಮಾಸ್ಕ್‌ ಧರಿಸುವಂತೆ ತಿಳಿ ಹೇಳಿದ ಪಿಡಿಓಗೆ ಹೊಡೆದು ಯುವಕ ಪರಾರಿ

ಈಗಾಗಲೇ ದೆಹಲಿಯ ತಬ್ಲೀಘಿ ಸಮವೇಶದಲ್ಲಿ ಭಾಗವಹಿಸಿದ್ದ ತುಮಕೂರಿನ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.