Asianet Suvarna News Asianet Suvarna News

ಶಾಂತವಾಗಿದ್ದ ಸರಳಾ ದೇವಿ ಕಾಲೇಜಿನ ಮತ್ತೆ ವಿವಾದ, ಕಣ್ಣೀರು ಹಾಕಿದ ಗ್ರಂಥಪಾಲಕಿ

ಬಳ್ಳಾರಿ ಸರಳಾದೇವಿ ಕಾಲೇಜಿನಲ್ಲಿ ಹೈಡ್ರಾಮಾ ನಡೆದಿದೆ. ಇಷ್ಟು ದಿನ ಬುರ್ಖಾ ತೆಗೆದಿಲ್ಲ ಈಗ್ಯಾಕೆ ತೆಗಿಯಬೇಕು ಎಂದು ಗ್ರಂಥಪಾಲಕಿ ಕಣ್ಣೀರು ಹಾಕಿದ್ದಾರೆ. ಬಳಿಕ ಪೊಲೀಸರು ಬಂದು ಮಹಿಳೆಯನ್ನು ಕರೆದುಕೊಂಡು ಹೋಗಿದ್ದಾರೆ.

ಶಿವಮೊಗ್ಗ, (ಫೆ.17): ಉಡುಪಿಯಲ್ಲಿ ಆರಂಭವಾದ ಸಮವಸ್ತ್ರ (Uniform) ಸಮರ ಚರ್ಚೆ ಇಡೀ ದೇಶದಾದ್ಯಂತ ವ್ಯಾಪಿಸಿದೆ. ಅದರಲ್ಲೂ ಕರ್ನಾಟಕದಲ್ಲಿ ಹಿಜಾಬ್ (Hijab) ವಿವಾದ ಭುಗಿಲೆದಿದ್ದು, ಒಂದು ಕಡೆ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ರೆ, ಇತ್ತ ಶಾಲಾ ಕಾಲೇಜುಗಳಲ್ಲಿ ಹೈಡ್ರಾಮಾಗಳು ನಡೆಯುತ್ತಿವೆ.

Hijab Row ಶಿವಮೊಗ್ಗದಲ್ಲಿ ಹೆಚ್ಚಾಗ್ತಿದೆ ಸಮವಸ್ಟ್ರ ಸಂಘರ್ಷ

ರಾಜ್ಯದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ತೆಗೆಯುವುದಿಲ್ಲ. ಹಿಜಾಬ್ ಹಾಕಿಕೊಂಡೇ ಕ್ಲಾಸ್‌ಗೆ ಬರುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ. ಹೈಕೋರ್ಟ್‌ ಆದೇಶದ ಬಗ್ಗೆ ಕಾಲೇಜು ಸಿಬ್ಬಂದಿ ಹಾಗೂ ಪೊಲೀಸರು ತಿಳಿಸಿ ಹೇಳಿದರೂ ವಿದ್ಯಾರ್ಥಿಗಳು ಕೇಳುತ್ತಿಲ್ಲ. ಪರೀಕ್ಷೆಯನ್ನೇ ಬಿಡುತ್ತೇವೆ ಹೊರತು ಹಿಜಾಬ್ ತೆಗೆಯಲ್ಲ ಎನ್ನುತ್ತಿದ್ದಾರೆ. ಇದರಿಂದ ಕಾಲೇಜು ಸಿಬ್ಬಂದಿ ಹಾಗೂ ಪೊಲೀಸರಿಗೆ ದೊಟ್ಟ ತಲೆನೋವಾಗಿ ಪರಿಣಮಿಸಿದೆ. ಇದರ ಮಧ್ಯೆ ಸಿಬ್ಬಂದಿಗಳೂ ಸಹ ಬುರ್ಕಾ ಹಾಕಿಕೊಂಡು ಬಂದಿದ್ದು, ಶಾಂತವಾಗಿದ್ದ ಕಾಲೇಜಿನಲ್ಲಿ ಮತ್ತೊಂದು ವಿವಾದ ಹುಟ್ಟಿಕೊಂಡಿದೆ.

ಹೌದು.. ಬಳ್ಳಾರಿಯ ಸರಳಾದೇವಿ ಕಾಲೇಜಿನಲ್ಲಿ ಹೈಡ್ರಾಮಾ ನಡೆದಿದೆ. ಇಷ್ಟು ದಿನ ಬುರ್ಖಾ ತೆಗೆದಿಲ್ಲ ಈಗ್ಯಾಕೆ ತೆಗಿಯಬೇಕು ಎಂದು ಗ್ರಂಥಪಾಲಕಿ ಕಣ್ಣೀರು ಹಾಕಿದ್ದಾರೆ. ಗ್ರಂಥಪಾಲಕಿ ನಡೆಗೆ ಪೊಲೀಸರು ಹಾಗೂ ಕಾಲೇಜು ಸಿಬ್ಬಂದಿ  ಕಕ್ಕಾಬಿಕ್ಕಿಯಾಗಿದ್ದಾರೆ.ಬಳಿಕ ಪೊಲೀಸರು ಬಂದು ಮಹಿಳೆಯನ್ನು ಕರೆದುಕೊಂಡು ಹೋಗಿದ್ದಾರೆ.

Video Top Stories