Asianet Suvarna News Asianet Suvarna News

ಕಾಂಗ್ರೆಸ್ ಕಚೇರಿಯಲ್ಲಿ ಇಂದಿರಾ ಬಾರ್, ನೆಹರು ಹುಕ್ಕಾಬಾರ್ ತೆರೆಯಲಿ: ಸಿ.ಟಿ ರವಿ ಸವಾಲ್

Aug 13, 2021, 9:38 AM IST

ಬೆಂಗಳೂರು (ಆ. 13): ಇಂದಿರಾ ಕ್ಯಾಂಟೀನ್ ಹೆಸರನ್ನು ಬದಲಾಯಿಸಿ ಅನ್ನಪೂರ್ಣೇಶ್ವರಿ ಹೆಸರಿಡಲು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಆಗ್ರಹಿಸಿದ್ದರು. ಸಿ ಟಿ ರವಿ ಹೇಳಿಕೆ ಕಾಂಗ್ರೆಸ್ಸಿಗರ ಕಣ್ಣು ಕೆಂಪಾಗಿಸಿತ್ತು. ಈಗ ಇನ್ನೊಂದು ಹೇಳಿಕೆ ಮೂಲಕ ಕಾಂಗ್ರೆಸ್ಸಿಗರನ್ನು ರೊಚ್ಚಿಗೆಬ್ಬಿಸಿದ್ದಾರೆ. 'ಕಾಂಗ್ರೆಸ್ ಕಚೇರಿಯಲ್ಲಿ ಇಂದಿರಾ ಬಾರ್, ನೆಹರು ಹುಕ್ಕಾಬಾರ್ ಕ್ಯಾಂಟೀನ್ ತೆರೆಯಲಿ ಎಂದು ಸವಾಲೆಸೆದಿದ್ದಾರೆ. 

ಮೇಕೆದಾಟು ವಿಚಾರದಲ್ಲಿ ಸಿ.ಟಿ ರವಿ ಯೂಟರ್ನ್: ಕರ್ನಾಟಕದ ಹಿತಾಸಕ್ತಿ ಕಡೆಗಣಿಸಿದ ನಾಯಕ!

ಸಿ ಟಿ ರವಿಯವರಿಗೆ ಅವರ ಆಸಕ್ತಿಗೆ ತಕ್ಕಂತೆ ಬಾರ್, ಹುಕ್ಕಾಬಾರ್ ನೆನಪಾಗಿದೆ. ಮುಖ್ಯಮಂತ್ರಿಗಳು ರವಿಯವರನ್ನು ಅಬಕಾರಿ ಸಚಿವರನ್ನಾಗಿ ಮಾಡಿ ಆಸೆ ಪೂರೈಸಬೇಕು ಎಂದು ಸಿದ್ದರಾಮಯ್ಯ ಕಾಲೆಳೆದಿದ್ದಾರೆ. 

ಸಿ ಟಿ ರವಿ ಹುಚ್ಚು ನಾಯಿ ಕಡಿತಕ್ಕೊಳಗಾದಂತೆ ಬಾಯಿಗೆ ಬಂಧಂತೆ ಮಾತನಾಡುತ್ತಿದ್ದಾರೆ. ನಾಡಿನ ಹಿತದೃಷ್ಟಿಯಿಂದ ಬಿಜೆಪಿ ವರಿಷ್ಠರು ಪಶುವೈದ್ಯ ಶಾಲೆಯಲ್ಲಿ ಚಿಕಿತ್ಸೆ ಕೊಡಿಸಲಿ. ಇಲ್ಲವೇ ಮಲ್ಲೇಶ್ವರಂ ಬಿಜೆಪಿ ಕಚೇರಿಯನ್ನೇ ಹುಚ್ಚಾಸ್ಪತ್ರೆ ಮಾಡಲಿ ಎಂದು ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.